ಸುದ್ಧಿಕನ್ನಡ ವಾರ್ತೆ
Goa: ಡಿಸೆಂಬರ್ 19 ರಂದು ಗೋವಾ ಮುಕ್ತಿ ದಿನದಂದು ಗೋವಾ ರಾಜ್ಯ ಸರ್ಕಾರವು ಗೋವಾ ಮುಕ್ತಿ ಸಂಗ್ರಾಮದಲ್ಲಿ ಹೋರಾಡಿದ 14 ಜನ ಹೋರಾಟಗಾರರ ಕುಟುಂಬಗಳಿಗೆ ಬಹುಮಾನ ನೀಡಲು ನಿರ್ಧರಿಸಿದೆ. ಗೋವಾ ಮುಕ್ತಿ ಸಂಗ್ರಾಮದಲ್ಲಿ ಸರ್ವಸ್ವವನ್ನು ಅರ್ಪಿಸಿದ ವೀರರಿಗೆ ಅದರ ಮೌಲ್ಯ ಕಟ್ಟಲು ಸಾಧ್ಯವಿಲ್ಲ. ಆದರೆ ಅವರನ್ನು ಸನ್ಮಾನಿಸಿ ಪ್ರತಿ ಕುಟುಂಬಕ್ಕೆ ತಲಾ 10 ಲಕ್ಷ ರೂ ಬಹುಮಾನ ನೀಡಲು ಗೋವಾ ಸರ್ಕಾರ ನಿರ್ಧರಿಸಿದೆ.
ಗೋವಾ ಮುಕ್ತಿ ಸಂಗ್ರಾಮದಲ್ಲಿ ಹೋರಾಡಿದ ಹುತಾತ್ಮರಿಗೆ ಇದುವರೆಗೂ ಯಾವುದೇ ಸರ್ಕಾರ ಇಷ್ಟು ದೊಡ್ಡ ಮೊತ್ತದ ಬಹುಮಾನ ನೀಡಿರಲಿಲ್ಲ. ಈ ಕುರಿತಂತೆ ಗೋವಾ ಸರ್ಕಾರವು 14 ಜನ ಹುತಾತ್ಮ ಯೋಧರ ಕುಟುಂಬಗಳನ್ನು ಹುಡುಕಿ ಅವರನ್ನು ಈ ವರ್ಷ ಗೌರವಿಸಲಿದೆ.
ಪ್ರಸಕ್ತ ವರ್ಷ ಮುಕ್ತಿ ದಿನದಂದು ಬಾಳಾರಾಯ ಮಾಪಾರಿ ರವರ ಪರವಾಗಿ ಬಸವರಾಜ ಹುಡಗಿ, ಶೇಷನಾಥ ವಾಡೆಕರ್, ತುಳಸೀರಾಮ ಬಾಲಕೃಷ್ಣ ಹಿರವೆ, ಬಾಬುರಾವ ಕೇಶವ ತೋರಾತ, ಸಖಾರಾಮ ಯಶವಂತ ಶಿರೋಡಕರ್, ರೋಹಿದಾಸ ಮಾಪಾರಿ, ಯಶವಂತ ಸುಖ ಆಗರವಡೇಕರ್, ರಾಮಚಂದ್ರ ನೇವಗಿ, ಬಾಪು ವಿಷ್ಣು ಗಾವಸ್, ಬಾಬಲಾ ತೊಂಡೋ ಪರಬ್, ಲಕ್ಷ್ನಣಭಾಯಿ ಸಾಳವೆ, ನರೇಶ ಪಾಟೀಲ್, ಡಾ.ಪರಶುರಾಮ ಶ್ರೀನಿವಾಸ ಆಚಾರ್ಯ ರವರ ಕುಟುಂಬಸ್ಥರನ್ನು ಸನ್ಮಾನಿಸಿ ತಲಾ 10 ಲಕ್ಷ ರೂ ಬಹುಮಾನ ನೀಡಲು ಗೋವಾ ಸರ್ಕಾರ ನಿರ್ಧರಿಸಿದೆ.