ಸುದ್ಧಿಕನ್ನಡ ವಾರ್ತೆ
ಪಣಜಿ: ಸತಾರಾ ಮೂಲದ ಪಾಯಲ್ ಮಾನೆ ಎಂಬ 18 ವರ್ಷದ ಯುವತಿ ನಾಪತ್ತೆಯಾಗಿರುವ ಬಗ್ಗೆ ಆಕೆಯ ಪೆÇೀಷಕರು ದೂರು ನೀಡಿದ್ದರು, ಕೊಂಕಣ ರೈಲ್ವೇ ಪೆÇಲೀಸರಿಗೂ ಈ ಮಾಹಿತಿ ನೀಡಲಾಗಿತ್ತು. ಮತ್ಸ್ಯಗಂಧ ಎಕ್ಸ್ಪ್ರೆಸ್ನಲ್ಲಿ ಕೇರಳಕ್ಕೆ ಹೋಗುತ್ತಿದ್ದಾಗ ಮಡಗಾಂವ್ ನಿಲ್ದಾಣದಲ್ಲಿ ಕೊಂಕಣ ರೈಲ್ವೆ ಪೆÇಲೀಸರು ಆಕೆಯನ್ನು ಬಂಧಿಸಿದ್ದಾರೆ. ಅಗತ್ಯ ವಿಧಾನಗಳ ನಂತರ ಬಾಲಕಿಯನ್ನು ಆಕೆಯ ಪೆÇೀಷಕರಿಗೆ ಒಪ್ಪಿಸಲಾಗಿದೆ.
ಸಿಕ್ಕಿರುವ ಮಾಹಿತಿ ಪ್ರಕಾರ ಬಾಲಕಿ ನಾಪತ್ತೆಯಾಗಿರುವ ಬಗ್ಗೆ ಗೋವಾ, ಕರ್ನಾಟಕ ಹಾಗೂ ಮಹಾರಾಷ್ಟ್ರ ಪೆÇಲೀಸ್ ಠಾಣೆಗಳಿಗೂ ಮಾಹಿತಿ ನೀಡಲಾಗಿತ್ತು. ಈ ಬಗ್ಗೆ ಕೊಂಕಣ ರೈಲ್ವೆ ಪೆÇಲೀಸರು ತನಿಖೆಯನ್ನೂ ಆರಂಭಿಸಿದ್ದರು. ಅದರಂತೆ, ಲೋಕಮಾನ್ಯ ಟಿಕಲ್ ಟರ್ಮಿನಸ್ನಿಂದ ಮಂಗಳೂರಿಗೆ ಓಡುವ ಮತ್ಸ್ಯಗಂಧ ಎಕ್ಸ್ಪ್ರೆಸ್ನಲ್ಲಿ ತನಿಖೆ ನಡೆಸುತ್ತಿರುವಾಗ ಕೊಂಕಣ ರೈಲ್ವೆ ಸಿಬ್ಬಂದಿ ಸುಭೀಶ್ ಸುಲೋಚನಾ (ಕೇರಳ) ಅವರೊಂದಿಗೆ ಪ್ರಯಾಣಿಸುತ್ತಿದ್ದ ಬಾಲಕಿಯನ್ನು ಪತ್ತೆ ಮಾಡಿದರು.
ಪಾಯಲ್ ಮತ್ತು ಸುಭೀಶ್ ಅವರನ್ನು ಬಂಧಿಸಿದ ನಂತರ, ಕೊಂಕಣ ರೈಲ್ವೆ ಪೆÇಲೀಸರು ಸತಾರಾ ಪೆÇಲೀಸರನ್ನು ಸಂಪರ್ಕಿಸಿದರು ಮತ್ತು ಎಲ್ಲಾ ದಾಖಲೆಗಳನ್ನು ಪೂರ್ಣಗೊಳಿಸಿದ ನಂತರ, ಈ ಹುಡುಗಿಯನ್ನು ಆಕೆಯ ಪೆÇೀಷಕರಿಗೆ ಹಸ್ತಾಂತರಿಸಲಾಯಿತು. ಒಟ್ಟಿನಲ್ಲಿ ಇದೊಂದು ಪ್ರೇಮ ಪ್ರಕರಣ ಎಂದು ವರದಿಯಾಗಿದೆ. ಈ ಬಗ್ಗೆ ಸತಾರಾ ಪೆÇಲೀಸರು ಹೆಚ್ಚಿನ ತನಿಖೆ ನಡೆಸಲಿದ್ದಾರೆ.