ಸುದ್ಧಿಕನ್ನಡ ವಾರ್ತೆ

ಪಣಜಿ: ಗೋವಾದ ಮಾಜಿ ಮುಖ್ಯಮಂತ್ರಿ ಪ್ರತಾಪಸಿಂಹ ರಾಣೆ ಹಾಗೂ ವಿಜಯಾದೇವಿ ರಾಣೆ ರವರು ಕಾರವೀರ ನಿವಾಸಿನಿ ಶ್ರೀ ಅಂಬಾಬಾಯಿ ದೇವಿಗೆ 17 ತೊಲೆ 54 ಗ್ರಾಂ ಚಿನ್ನದ  ಪದಕ, 590 ಗ್ರಾಂ ಚಿನ್ನದ ಬಳೆಗಳನ್ನು ಅರ್ಪಣೆ ಮಾಡಿದ್ದಾರೆ.

ರಾಣೆ ರವರ ಮಗ ಗೋವಾ ರಾಜ್ಯ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ರವರು ಮಹಾರಾಷ್ಟ್ರ ದೇವಸ್ಥಾನ ಸಮೀತಿಯ ಕಾರ್ಯದರ್ಶಿ ಶಿವರಾಜ ನಾಯ್ಕವಾಡೆ ರವರಿಗೆ ಆಭರಣಗಳನ್ನು ಹಸ್ತಾಂತರಿಸಿದರು.

ಗೋವಾದ ಮಾಜಿಮುಖ್ಯಮಂತ್ರಿ ಪ್ರತಾಪಸಿಂಹ ರಾಣೆ ರವರು ಅಂಬಾಬಾಯಿಗೆ ಒಟ್ಟೂ 30,11,017  ಲಕ್ಷ  ರೂ ಮೌಲ್ಯದ ಚಿನ್ನದ ಆಭರಣಗಳನ್ನು ಸಮಪರ್ಣಣೆ ಮಾಡಿದ್ದಾರೆ. ಇದಕ್ಕೂ ಮುನ್ನ ಅಕೋಲಾದ ಭಕ್ತರೊಬ್ಬರು 56 ಲಕ್ಷ ರೂ ಮೌಲ್ಯದ ಸಿಂಹವನ್ನು ಅರ್ಪಣೆ ಮಾಡಿದ್ದರು.