ಸುದ್ಧಿಕನ್ನಡ ವಾರ್ತೆ
Goa : ಗೋವಾ ಮತ್ತು ಕರ್ನಾಟಕದ ನಡುವಿನ ಪಶ್ಚಿಮ ಘಟ್ಟದ ಕ್ಯಾಸಲ್ ರಾಕ್ ನಿಂದ ಕುಳೆ ನಡುವಿನ ರೈಲ್ವೆ ಡಬಲ್ ಟ್ರ್ಯಾಕ್ ಯೋಜನೆ ರದ್ಧುಗೊಳಿಸಲು ಕೇಂದ್ರ ಸಶಕ್ತ ಸಮೀತಿಯು ಶಿಫಾರಸ್ಸು ಮಾಡಿದೆ. ಈ ಶಿಫಾರಸ್ಸಿಗೆ ಬೆಂಬಲ ನೀಡುವಂತೆ ಸಂಶೋಧಕರು ಮತ್ತು ವೈಜ್ಞಾನಿಕರು ಜಂಟಿ ನಿವೇದನೆಯನ್ನು ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಗೋವಾ ಮತ್ತು ಕರ್ನಾಟಕ ನಡುವಿನ ಪಶ್ಚಿಮ ಘಟ್ಟದಲ್ಲಿ ರೈಲ್ವೆ ಡಬಲ್ ಟ್ರ್ಯಾಕ್ ಯೋಜನೆ ಪರಿಸರ ದೃಷ್ಠಿಯಿಂದ ಅತ್ಯಂತ ವಿನಾಶಕಾರಿಯಾಗುವ ಸಾಧ್ಯತೆಯಿದೆ. ಇದರಿಂದಾಗಿ ಈ ಯೋಜನೆಯನ್ನು ಸಂಪೂರ್ಣ ರದ್ಧುಗೊಳಿಸಲು ಪುನರ್ವಿಚಾರ ನಡೆಸುವ ಅಗತ್ಯವಿದೆ ಎಂದು ಈ ನಿವೇದನೆಯಲ್ಲಿ ಹೇಳಲಾಗಿದೆ.

ಈ ಡಬಲ್ ಟ್ರ್ಯಾಕ್ ಭಗವಾನ್ ಮಹಾವೀರ ಅಭಯಾರಣ್ಯ ಹಾಗೂ ಮೋಲೆಮ್ ರಾಷ್ಟ್ರೀಯ ಉದ್ಯಾನವನದ ಮೂಲಕ ಸಾಗುತ್ತದೆ. ಇದು ಗೋವಾದಲ್ಲಿ ಅತ್ಯಂತ ಪ್ರಮುಖ ಅಭರಣ್ಯವೂ ಆಗಿದೆ.