ಸುದ್ಧಿಕನ್ನಡ ವಾರ್ತೆ
Goa: ಗೋವಾ ಶಾಸನಸ್ಯ ರಾಜ್ಯ ಶೈಕ್ಷಣಿಕ ಅನುಸಂಧಾನ ಪ್ರಶಿಕ್ಷಣ ಪರಿಷತ್, ಗೋಮಂತಕ ಸಂಸ್ಕøತೋತ್ತೇಜಕ ಮಂಡಳ ಕವಳೆ ವತಿಯಿಂದ ಪೊಂಡಾ ಕವಳೆಯಲ್ಲಿ “ಗೀತಾ ಜಯಂತಿ”ಯ ಅಂಗವಾಗಿ ಶ್ರೀಮಧ್ಬಗವಧ್ಗೀತಾ ಪಂಚಮೋಧ್ಯಾಯ ಕಂಠಪಾಠ ಸ್ಫರ್ಧೆಯಲ್ಲಿ ಪಣಜಿಯ ಪೀಪಲ್ಸ ಹೈಸ್ಕೂಲ್ ವಿದ್ಯಾರ್ಥಿನಿ ನವಮಿ ವಿಶ್ವನಾಥ ಭಟ್ ಇವಳು ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.
ಪ್ರಥಮ ಸ್ಥಾನ ಪಡೆದ ನವಮಿ ಭಟ್ ಇವಳಿಗೆ ವಿದ್ಯಾಪ್ರಭೋಧಿನಿ ಕಾಲೇಜಿನ ಪ್ರಾಂಶುಪಾಲರಾದ ಮನಿಶಾ ಕುಲಕರ್ಣಿ ರವರು ಪ್ರಶಸ್ತಿ ಪ್ರಧಾನ ಮಾಡಿದರು.
ವಿದ್ಯಾರ್ಥಿನಿ ನವಮಿ ಭಟ್ ಇವಳು ಈ ಹಿಂದೆಯೂ ಕೂಡ ಭಗವಧ್ಘೀತಾ ಕಂಠಪಾಠದ ಹಲವು ಸ್ಫರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದ್ದಾಳೆ.
ವಿದ್ಯಾರ್ಥಿನಿ ನವಮಿ ಇವಳ ತಂದೆ ಮೂಲತಃ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ತೆರೆಗಾಳಿ ಮೂಲದವರು. ಇವರು ಉದ್ಯೋಗದ ನಿಮಿತ್ತ ಪಣಜಿ ಸಮೀಪದ ಮೆರಶಿಯಲ್ಲಿ ಸ್ಥಾಯಿಕರಾಗಿದ್ದಾರೆ.
ವಿದ್ಯಾರ್ಥಿನಿ ನವಿ ಭಟ್ ಇವಳಿಗೆ ಗೋವಾದ ವಿವಿಧ ಸಂಘಟನೆಗಳಿಂದ ಪ್ರಶಂಸೆ ವ್ಯಕ್ತವಾಗಿದೆ.