ಸುದ್ಧಿಕನ್ನಡ ವಾರ್ತೆ
Goa: ಮಧುಚಂದ್ರಕ್ಕಾಗಿ ಗೋವಾಕ್ಕೆ ಅತಿಹೆಚ್ಚಿನ ಮೆಚ್ಚುಗೆ ವ್ಯಕ್ತವಾಗಿದೆ. ಇಂದು ದೇಶದ ಶೇ 60 ರಷ್ಟು ನವ ಜೋಡಿಗಳು ದೇಶದೊಳಗಿನ ಮಧುಚಂದ್ರ(Honeymoon) ಸ್ಥಳಗಳಿಗೆ ಪ್ರಾಧಾನ್ಯತೆ ನಿಡುತ್ತಾರೆ ಈ ಪೈಕಿ ಗೋವಾ ಮೊದಲ ಆಯ್ಕೆಯಾಗಿದೆ.
“ವೆಡ್ ಮಿ ಗುಡ್ ವಿವಾಹ” ಆಯೋಜಿಸುವ ಯಾಪ್ ಮೂಲಕ ನಡೆಸಿದ ಸರ್ವೆಯಲ್ಲಿ ಗೋವಾ, ಮನಾಲಿ, ಕೇರಳ, ಶಿಮ್ಲಾ, ಹಾಗೂ ಈಶಾನ್ಯ ಭಾರತ ಇವು ಹೆಚ್ಚು ಇಷ್ಟ ಪಡುವ ಸ್ಥಳಗಳಾಗಿವೆ. ಮಧುಚಂದ್ರಕ್ಕಾಗಿ (Honeymoon) ದೇಶದೊಳಗಿನ ರಾಜ್ಯಗಳ ಪೈಕಿ ಸರ್ವೆಯಲ್ಲಿ ಪ್ರಮುಖವಾಗಿ ಗೋವಾ ರಾಜ್ಯ ಪ್ರಥಮ ಸ್ಥಾನದಲ್ಲಿರುವುದು ಸ್ಪಷ್ಟವಾಗಿದೆ.
ಈ ಸರ್ವೆಯಲ್ಲಿ 3500 ಕ್ಕೂ ಹೆಚ್ಚು ನವ ದಂಪತಿಗಳು ಮತ್ತು 500 ಕ್ಕೂ ಹೆಚ್ಚು ವೆಡ್ಡಿಂಗ್ ವೆಂಡರ್ಸ ಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಇದರಲ್ಲಿ ಶೇ 40 ರಷ್ಟು ಜೋಡಿಗಳು ಮಾತ್ರ ಅತರಾಷ್ಟ್ರೀಯ ತಾಣಗಳನ್ನು ಇಷ್ಟಪಟ್ಟಿರುವುದು ಕಂಡುಬಂದಿದೆ.