ಸುದ್ಧಿಕನ್ನಡ ವಾರ್ತೆ
Goa: ನಾನು ಬಿಹಾರದಲ್ಲಿ ಖುಷಿಯಾಗಿದ್ದೇನೆ. ಅಲ್ಲಿ ನನ್ನ ಕೆಲಸ ಕೂಡ ಒಳ್ಳೆ ರೀತಿಯಲ್ಲಿ ನಡೆಯುತ್ತಿದೆ. ನಾನು ಆಗಾಗ ಗೋವಾಕ್ಕೆ ಬಂದು ಹೋಗುತ್ತಿರುತ್ತೇನೆ. ನಾನು ಗೋವಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದೇನೆ ಎಂಬ ಸುದ್ಧಿ ಸುಳ್ಳು ಸುದ್ಧಿಯಾಗಿದೆ. ಈ ಸುದ್ಧಿ ಸತ್ಯವಲ್ಲ ಎಂದು ಬಿಹಾರದ ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಹೇಳಿದ್ದಾರೆ. ಗೋವಾ ರಾಜಧಾನಿ ಪಣಜಿಯ ವಿವೇಕಾನಂದ ಕೇಂದ್ರ ಗೋವಾ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಉಪಸ್ಥಿತರಿದ್ದು ನಂತರ ಸುದ್ಧಿಗಾರರೊಂದಿಗೆ ಮಾತನಾಡುತ್ತಿದ್ದರು.

ಭಾರತದ ಆತ್ಮ ಆಧ್ಯಾತ್ಮ ಆಗಿದೆ. ಪ್ರಾಚೀನ ಕಾಲದಲ್ಲಿ ಹಲವು ವಿಚಾರವಂತರು ಆಧ್ಯಾತ್ಮ, ಪರಂಪರೆಯ ವಿಚಾರ ಮಾಡಿದ್ದರು. ಸ್ವಾಮಿ ವಿವೇಕಾನಂದರು ಕೂಡ ಭಾರತಕ್ಕಾಗಿ ಆವಶ್ಯಕ ಆಧ್ಯಾತ್ಮಿಕತೆಯ ಮಾರ್ಗವನ್ನು ಸಿದ್ಧಪಡಿಸಿದ್ದರು. ಭಾರತ ಸ್ವಾತಂತ್ರ್ಯವಾದಮೇಲೆ ನಾವು ಅದೇ ದಾರಿಯಲ್ಲಿ ನಡೆಯುವ ಅಪೇಕ್ಷೆ ಹೊಂದಿದ್ದರು ಎಂದು ರಾಜೇಂದ್ರ ಅರ್ಲೇಕರ್ ನುಡಿದರು.

ಬ್ರಿಟೀಷ್ ಕಾಲದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹಲವು ಬದಲಾವಣೆಯಾಗಿತ್ತು. ಈ ಪದ್ಧತಿ ಇನ್ನೂ ಮುಂದುವರೆದಿದೆ. ಈ ಪಾಶ್ಚಾತ್ಯ ಶಿಕ್ಷಣ ಪದ್ಧತಿಯಿಂದಾಗಿ ಹಲವು ಬದಲಾವಣೆಯಾಗತೊಡಗಿದೆ. ತಂದೆ,ತಾಯಿ,ಚಿಕ್ಕಪ್ಪ, ಮಾವಾ, ಈ ಜಾಗದಲ್ಲಿ ಮಮ್ಮಿ, ಡ್ಯಾಡಿ, ಅಂಕಲ್, ಆಂಟಿ ಹೀಗೆ ಪಾಶ್ಚಾತ್ಯ ಹೆಸರುಗಳು ಇಂದು ಹೆಚ್ಚು ಬಳಕೆಯಾಗತೊಡಗಿದೆ.