ಸುದ್ದಿ ಕನ್ನಡ ವಾರ್ತೆ
Goa:ಗೋವಾ ರಾಜ್ಯದಲ್ಲಿ ಕನ್ನಡ ಭವನ ನಿರ್ಮಾಣದ ಕನಸು ನನಸಾಗುವ ಕಾಲ ಕೂಡಿ ಬರುತ್ತಿದೆ.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಈಗಾಗಲೇ ಗೋವಾದಲ್ಲಿ ಹಲವೆಡೆ ಕನ್ನಡ ಭವನಕ್ಕಾಗಿ ಜಾಗ ಪರಿಶೀಲನೆ ನಡೆಸಿದೆ.
ಭಾನುವಾರ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ್ ಹಾಗೂ ಕಾರ್ಯದರ್ಶಿ ಪ್ರಕಾಶ್ ಮತ್ತಿಹಳ್ಳಿ ರವರು ಗೋವಾದ ವರ್ಣ ಜಂಕ್ಷನ್ ಬಳಿ ಜಾಗ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಗೋವಾ ರಾಜ್ಯ ಅಧ್ಯಕ್ಷ ಸಿದ್ದಣ್ಣ ಮೇಟಿ, ಗೌರವ ಕಾರ್ಯದರ್ಶಿಗಳಾದ ನಾಗರಾಜ ಗೊಂದಕರ, ಪ್ರಕಾಶ್ ಭಟ್, ಕನ್ನಡ ಸಾಹಿತ್ಯ ಪರಿಷತ್ತು ಪಣಜಿ ತಾಲೂಕ ಘಟಕದ ಅಧ್ಯಕ್ಷ ಹನುಮಂತ ಗೋರವರ, ಕಾರ್ಯದರ್ಶಿ ಸುರೇಶ್ ಹರೀಶೇಟ್, ಮತ್ತಿತರರು ಉಪಸ್ಥಿತರಿದ್ದರು.