ಸುದ್ಧಿಕನ್ನಡ ವಾರ್ತೆ
Goa: ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಾನು ತಂದೆಯವರಿಗೆ ಗೌರವ ವಂದನೆ ಸಲ್ಲಿಸಲು ಬಂದಿದ್ದೇನೆ. ಗೋವಾಕ್ಕೆ ಸ್ವಾತಂತ್ರ್ಯಕ್ಕೊಸ್ಕರ ಯಾರು ಪ್ರಾಣಾಹುತಿ ನೀಡಿದ್ದಾರೊ ಅವರನ್ನು ಸ್ಮರಿಸುವುದು ಮತ್ತು ಅವರ ಬಗ್ಗೆ ಮಾಹಿತಿ ನೀಡುವುದು ಅತ್ಯವಶ್ಯಕವಾಗಿದೆ ಎಂದು ನಿರ್ದೇಶಕ ದಿಲೀಪ ಬೋರಕರ್ ನುಡಿದರು.
ಗೋವಾ ರಾಜಧಾನಿ ಪಣಜಿಯಲ್ಲಿ ನಡೆಯುತ್ತಿರುವ 55 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಟ ನಾಗಾರ್ಜುನ ರವರ “ಭಾರತ ಹೆ ಹಮ್” ಅಡಿಯಲ್ಲಿ 52 ಎನಿಮೇಶನ್ ಚಲನಚಿತ್ರಗಳ ಪ್ರದರ್ಶನ ಉಧ್ಘಾಟನೆ ಸಂದರ್ಭದಲ್ಲಿ ಅವರು ಮಾತನಾಡುತ್ತಿದ್ದರು.
ಕಳೆದ 23 ವರ್ಷಗಳಿಂದ ಗೋವಾದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಇಂತಹ ಒಂದೇ ಒಂದು ಆವೃತ್ತಿಯನ್ನೂ ಪ್ರಸಾರ ಮಾಡಿಲ್ಲ. ಗೋವಾ ಸರ್ಕಾರ ಕೂಡ ಇದನ್ನು ಮಾಡಿಲ್ಲ. ಗೋವಾ ರಾಜ್ಯವನ್ನು ಪೋರ್ಚುಗೀಸರ ಆಡಳಿತದಿಂದ ಮುಕ್ತಗೊಳಿಸಲು ಹಾಗೂ ನಂತರ ರಾಜ್ಯವನ್ನು ಪುನರುತ್ಥಾನಗೊಳಿಸಲು ತಮ್ಮ ಆಯುಷ್ಯವನ್ನು ಕಳೆದ ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಕೂಡ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನಡೆದಿಲ್ಲ ಎಂದು ದಿಲೀಪ ಬೋರಕರ್ ಬೇಸರ ವ್ಯಕ್ತಪಡಿಸಿದರು.
ರವೀಂದ್ರ ಕೇಳೆಕರ್ ರವರು ಗಾಂಧಿವಾಧಿ. ಅವರು ಗಾಂಧಿವಾಧಿ ವಿಚಾರವಂತ ಎಂದು ದೇಶಾದ್ಯಂತ ಮಾನ್ಯತೆಯಿದೆ. ರವೀಂದ್ರ ಕೇಳೆಕರ್ ರವರು ಗೋವಾ ಮುಕ್ತಿ ಸಂಗ್ರಾಮದಲ್ಲಿ ತಮ್ಮ ಯೋಗದಾನ ನೀಡಿದ್ದಾರೆ. ಗೋವಾ ರಾಜ್ಯ ನೆರೆಯ ರಾಜ್ಯಗಳೊಂದಿಗೆ ವಿಲೀನಗೊಳ್ಳಬಾರದು ಎಂದು ಕೂಡ ತಮ್ಮ ಸಹಕಾರಿಗಳೊಂದಿಗೆ ಹೋರಾಡಿ ಗೋವಾದ ಸ್ವಾತಂತ್ರ್ಯ ಅಸ್ತಿತ್ವವನ್ನು ಉಳಿಸಿದವರು. ಕೊಂಕಣಿ ಭಾಷೆ ಒಂದು ಸ್ವತಂತ್ರ ಭಾರತೀಯ ಭಾಷೆ ಎಂದು ಸಾಹಿತ್ಯ ಅಕಾಡಮಿಯ ಮಾನ್ಯತೆ ಲಭಿಸುವಂತೆ ಮಾಡಿರುವುದರೊಂದಿಗೆ ಗೋವಾದ ಪ್ರತಿಯೊಂದು ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಅವರ ಹೋರಾಟದ ಫಲವನ್ನು ನಾವು ಇಂದು ಅನುಭವಿಸುತ್ತಿದ್ದೇವೆ. ಇಂತಹ ಮಹಾನ್ ಗೋಮಂತಕೀಯರ ಹೋರಾಟದ ವಿಷಯವನ್ನು ನಮ್ಮ ಯುವ ಪೀಳಿಗೆಗೆ ತಿಳಿಸುವ ಅಗತ್ಯವಿದೆ ಎಂದು ನಿರ್ದೇಶಕ ದಿಲೀಪ ಬೋರಕರ್ ಅಭಿಪ್ರಾಯಪಟ್ಟರು.