ಸುದ್ಧಿಕನ್ನಡ ವಾರ್ತೆ
Goa Panaji: ಗೋವಾ ಕನ್ನಡ ಸಮಾಜ ಪಣಜಿಯ ವಿಶೇಷ ಸರ್ವಸಾಧಾರಣ ಸಭೆ ಪಣಜಿಯ ಕೆಫೆ ಬೆಂಗಳೂರು ಹೋಟೆಲ್ ನಲ್ಲಿ ಜರುಗಿತು. ಗೋವಾ ಕನ್ನಡ ಸಮಾಜದ ಉಪಾಧ್ಯಕ್ಷ ಸ್ಥಾನಕ್ಕೆ ಪ್ರಶಾಂತ ಜೈನ್ ಹಾಗೂ ಸದಸ್ಯರಾಗಿ ಚಿನ್ಮಯ್ ಎಂ.ಸಿ ರವರನ್ನು ಆಯ್ಕೆ ಮಾಡಲಾಯಿತು.
ನವೆಂಬರ್ 30 ರಂದು ಪಣಜಿಯಲ್ಲಿ ಆಯೋಜಿಸಿರುವ ಕನ್ನಡ ರಾಜ್ಯೋತ್ಸವ ಆಯೋಜನೆಯ ವಿಷಯದ ಕುರಿತು ಈ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಅಂತೆಯೇ ಡಿಸೆಂಬರ್ 19 ರಂದು ನಡೆಯಲಿರುವ ಗೋವಾ ಮುಕ್ತಿ ದಿನಾರಣೆಯ ಕುರಿತು ಈ ಸಭೆಯಲ್ಲಿ ಚರ್ಚಿಸಲಾಯಿತು. ಉಪಸ್ಥಿತರಿದ್ದ ಸದಸ್ಯರು ತಮ್ಮ ಅಭಿಪ್ರಾಯ ಮಂಡಿಸಿದರು.
ಈ ಸಂದರ್ಭದಲ್ಲಿ ಗೋವಾ ಕನ್ನಡ ಸಮಾಜದ ಅಧ್ಯಕ್ಷ ಅರುಣಕುಮಾರ್, ಉಪಾಧ್ಯಕ್ಷ ಶ್ರೀನಿವಾಸ್ ಪೈ, ಖಜಾಂಚಿ ಸಂದೇಶ ಗಾಡವಿ, ಕಾರ್ಯದರ್ಶಿ ಶ್ರೀಕಾಂತ ಲೋಣಿ,ನಿಕಟಪೂರ್ವ ಅಧ್ಯಕ್ಷ ಮಲ್ಲಿಕಾರ್ಜುನ ಬದಾಮಿ, ಸದಸ್ಯರಾದ ಸಿಜಿ ಕಣ್ಣೂರ್, ಮಂಜು ದೊಡ್ಡಮನಿ, ಸುನೀಲ್ ಕುಮಟಳ್ಳಿ, ಇನ್ನಿತರ ಸದಸ್ಯರು ಉಪಸ್ಥಿತರಿದ್ದರು.