ಸುದ್ಧಿಕನ್ನಡ ವಾರ್ತೆ
Goa : ಆದಿ ಕಾಲದಿಂದಲೂ ದೇವಾನು ದೇವತೆಗಳು ನೃತ್ಯ, ಸಂಗೀತವನ್ನು ಅಳವಡಿಸಿಕೊಂಡಿದ್ದರು. ಶಿವನು ನೃತ್ಯ ಮಾಡುತ್ತಿದ್ದರು, ಸರಸ್ವತಿ ವೀಣೆ ನುಡಿಸುತ್ತಿದ್ದರು, ಹೀಗೆ ನಮ್ಮ ಜೀವನದಲ್ಲಿಯೂ ಕಲೆ, ಸಂಗೀತ ಇವು ಮಾನಸಿಕ ಶಾಂತತೆಯನ್ನು ನೀಡುತ್ತದೆ. ಕಲಾವಿದರು ಜನರನ್ನು ತಮ್ಮ ಕಲೆಯ ಮೂಲಕ ನಗಿಸುತ್ತಾರೆ. ಆದರೆ ಅವರು ಕೂಡ ತಮ್ಮ ಜೀವನದಲ್ಲಿ ಸಂತೋಷವಾಗಿರುವುದು ಮುಖ್ಯ. ಅವರು ಕೂಡ ತಮ್ಮ ಮಾನಸಿಕ ಸ್ಥೈರ್ಯ ಕಾಯ್ದುಕೊಳ್ಳಬೇಕು. ಕಲಾವಿದರು ಎಂದಿಗೂ ಅಮರ ಎಂದು ಆರ್ಟ ಆಫ್ ಲಿವಿಂಗ್ ನ ರವಿಶಂಕರ ಗುರೂಜಿ ನುಡಿದರು.
ಗೋವಾ ರಾಜಧಾನಿ ಪಣಜಿ ಸಮೀಪದ ಶಾಮಪ್ರಸಾದ ಮುಖರ್ಜಿ ಸ್ಟೇಡಿಯಂಬಲ್ಲಿ ನವೆಂಬರ್ 20 ಬುಧವಾರ ಸಂಜೆ ಆಯೋಜಿಸಿದ್ದ 55 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವವನ್ನು (IFFI Goa) ತೆಂಗಿನ ಗಿಡಕ್ಕೆ ನೀರುಣಿಸುವ ಮೂಲಕ ರವಿಶಂಕರ ಗುರೂಜಿ ಉಧ್ಘಾಟನೆ ನೆರವೇರಿಸಿ ಮಾತನಾಡಿದರು.
ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾತನಾಡಿ- ಪ್ರಸಕ್ತ ಬಾರಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಫಿಲ್ಮ ಬಜಾರ್, ಫಿಲ್ಮ ಪರೇಡ್ ಕೂಡ ನಡೆಸುತ್ತಿದ್ದೇವೆ, ಇದು ವಿಶೇಷ ಆಕರ್ಷಣೆಯಾಗಿರಲಿದೆ. ಗೋವಾಕ್ಕೆ ದೇಶ-ವಿದೇಶಿಯ ಎಲ್ಲ ಕಲಾಕಾರರಿಗೆ ಹಾಗೂ ಪ್ರತಿನಿಧಿಗಳಿಗೆ ಮತ್ತೊಮ್ಮೆ ಸ್ವಾಗತ ಕೋರುತ್ತೇನೆ ಎಂದರು.
ಈ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್, ರಾಜ್ಯಸಭಾ ಸದಸ್ಯ ಸದಾನಂದ ತಾನಾವಡೆ, ಸಂಜಯ ರಾಜು, ಫೆಸ್ಟಿವಲ್ ನಿರ್ದೇಶಕ ಶೇಖರ್ ಕಪೂರ್, ಚಿತ್ರ ನಟಿ ಖುಷ್ಬು, ಗೋವಾ ಇಎಸ್ ಜಿ ಉಪಾಧ್ಯಕ್ಷೆ ದಿಲಾಯಲಾ ಲೋಬೊ ಸೇರಿದಂತೆ ದೇಶ-ವೊದೇಶಗಳ ಚಲನಚಿತ್ರ ಕ್ಷೇತ್ರದ ದಿಗ್ಗಜರು ಉಪಸ್ಥಿತರಿದ್ದರು.
ಪ್ರಸಕ್ತ ವರ್ಷ ಚಲನಚಿತ್ರೋತ್ಸವದಲ್ಲಿ 15 ಜಾಗತಿಕ,40 ಏಷ್ಯಾ ಪ್ರೀಮಿಯರ್, ಹಾಗೂ 106 ಭಾರತೀಯ ಚಲನಚಿತ್ರಗಳು ಸೇರಿ ಒಟ್ಟೂ 180 ಕ್ಕೂ ಅಧಿಕ ಚಲನಚಿತ್ರಗಳು ಪ್ರದರ್ಶನಗೊಳ್ಳಲಿದೆ. ಇದರಲ್ಲಿ 81 ದೇಶದಲ್ಲಿನ ಪುರಸ್ಕಾರ ಪಡೆದ ಚಲನಚಿತ್ರಗಳು ಪ್ರದರ್ಶನಗೊಳ್ಳಲಿದೆ.
ಗೋವಾದಲ್ಲಿ ಇದೀಗ ಉಧ್ಘಾಟನೆಗೊಂಡಿರುವ 55 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ನವೆಂಬರ್ 28 ರವರೆಗೆ ನಡೆಯಲಿದೆ. ಪ್ರಸಕ್ತ ವರ್ಷದ ಚಲನಚಿತ್ರೋತ್ಸವದಲ್ಲಿ ಹಲವು ವಿಶೇಷತೆಗಳಿದೆ. ಈ ಮಹೋತ್ಸದಲ್ಲಿ ದೇಶ-ವಿದೇಶಿಯ ಕಲಾಕಾರರು ಪಾಲ್ಗೊಂಡಿದ್ದು ಪಾರಂಕರಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ. 2004 ರಿಂದ ಗೋವಾದಲ್ಲಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭಗೊಂಡಿದ್ದು, ಗೋವಾ ಚಲನಚಿತ್ರೋತ್ಸವ ಆಯೋಜನೆಯ ಖಾಯಂ ಸ್ಥಳವಾಗಿದೆ.