ಸುದ್ಧಿಕನ್ನಡ ವಾರ್ತೆ

ಪಣಜಿ: ಗೋವಾದಲ್ಲಿ ಒಂದೂವರೆ ದಿನದ ಗಣಪತಿ ವಿಸರ್ಜನೆ ನಡೆಯಿತು. ಆದರೆ ಇಂದು ಗಣಪತಿಯ ವಿಸರ್ಜನೆಯ ವಿವಿಧ ಸ್ಥಳಗಳು ಹೃದಯ ವಿದ್ರಾವಕ ದೃಶ್ಯಗಳಿಗೆ ಸಾಕ್ಷಿಯಾಗುತ್ತಿವೆ. ಈ ವರ್ಷವೂ ಪ್ಲಾಸ್ಟರ್ ಆಫ್ ಪ್ಯಾರಿಸ್ ವಿಗ್ರಹಗಳಿಗೆ ಪೂಜೆ ಸಲ್ಲಿಸಲಾಗಿತ್ತು ಎಂಬುದು ಆಕಂಕಕರ ವಿಷವಾಗಿದೆ, ಇದರಿಂದಾಗಿ ಗಣೇಶನ ಮೂರ್ತಿಗಳು ಸರಿಯಾಗಿ ಕರಗಿಲ್ಲ. ಗೋವಾದ ಕಡಲತೀರದಲ್ಲಿ ಗಣೇಶನ ಮೂರ್ತಿಯ ಅವಶೇಷಗಳು ಪತ್ತೆಯಾಗಿವೆ. ಭಕ್ತಿಯಿಂದ ಪೂಜಿಸಿದ ಗಜಾನನ ಮೂರ್ತಿಯ ವಿಸರ್ಜನೆಯ ನಂತರ ಇಂತಹ ದೃಶ್ಯ ಹೃದಯ ಕಲಕುತ್ತದೆ.

ಗಣೇಶ ಚತುರ್ಥಿ ಮುನ್ನ ನಡೆದ ಗೋವಾ ವಿಧಾನಸಭೆಯ ಮಳೆಗಾಲದ ಅಧಿವೇಶನದಲ್ಲಿ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್ ಪ್ಲಾಸ್ಟರ್ ಆಫ್ ಪ್ಯಾರಿಸ್ ವಿಗ್ರಹಗಳ ತಯಾರಿಕೆ ನಿಲ್ಲಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದರು. ಪ್ಲಾಸ್ಟರ್ ಆಫ್ ಪ್ಯಾರಿಸ್ ಪ್ರತಿಮೆಗಳನ್ನು ರಾಜ್ಯಾದ್ಯಂತ ನಿಷೇಧಿಸಲಾಗಿದೆ. ರಾಜ್ಯದ ಗಡಿಗಳಲ್ಲಿಯೂ ನಿಗಾ ಇರಿಸಲಾಗಿದೆ. ಈ ವೇಳೆ ಒಂದೆರಡು ಬಾರಿ ನೇರ ಕ್ರಮವನ್ನೂ ಕೈಗೊಳ್ಳಲಾಗಿತ್ತು. ಪರಿಸರ ಉಳಿಸಿ ಎಂದು ಜನರಿಗೆ ಸಲಹೆ ನೀಡುವ ಸರ್ಕಾರ ಅದನ್ನು ಮಾಡುವಲ್ಲಿ ವಿಫಲವಾಗಿರುವುದು ಈಗ ಕಂಡು ಬರುತ್ತಿದೆ.

ಆದರೆ ಪ್ರತಿ ವರ್ಷ ನಡೆಯುವ ಪ್ರೀತಿಯ ಗಣರಾಯನ ಅಗೌರವ ಈ ವರ್ಷವೂ ನಿಂತಿಲ್ಲ, ಈ ಬಗ್ಗೆ ಸರಕಾರ ಗಮನ ಹರಿಸಬೇಕು ಎಂಬ ಭಾವನೆ ಗೋವಾದ ಪ್ರಜ್ಞಾವಂತ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಮೂಡಿಸಿದ್ದಾರೆ.