ಸುದ್ಧಿಕನ್ನಡ ವಾರ್ತೆ
Goa: ದೆಹಲಿಯಿಂದ ಗೋವಾಕ್ಕೆ ಬರುತ್ತಿದ್ದ ವಿಮಾನದಲ್ಲಿ ಮಹಿಳಾ ಪ್ರವಾಸಿಯೊಂದಿಗೆ ಆಕ್ಷೇಪಾರ್ಹ ವರ್ತನೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 23 ವರ್ಷದ ಹರಿಯಾಣದ ಪ್ರವಾಸಿಯನ್ನು ಗೋವಾ ದಾಬೋಲಿಂ ಪೋಲಿಸರು ಬಂಧಿಸಿದ್ದಾರೆ.

ಜಿತೆoದರ ಜಂಗಿಯನ್ ಎಂಬ ವ್ಯಕ್ತಿಯನ್ನು ಗೋವಾ ದಾಬೋಲಿಂ ಪೋಲಿಸರು ಬಂಧಿಸಿದ್ಧಾರೆ. ಈ ವ್ಯಕ್ತಿಯು ವಿವಾನದಲ್ಲಿ 28 ವರ್ಷದ ದೆಹಲಿಯ ಮಹಿಳೆಯೊಂದಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಪೋಲಿಸರು ಬಂಧಿಸಿದ್ದಾರೆ.

ಈ ಪ್ರಕರಣದಲ್ಲಿ ಲಭ್ಯವಾದ ಮಾಹಿತಿಯ ಅನುಸಾರ- ಏರ್ ಇಂಡಿಯಾ ಎಐ-884 ದೆಹಲಿ-ಗೋವಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಯುವತಿಯು ದೂರಿದ್ದಾಳೆ.

ಯುವತಿಯು ಗೋವಾ ದಾಬೋಲಿಂ ವಿಮಾನ ನಿಲ್ದಾಣಕ್ಕೆ ಬಂದ ಕೂಡಲೆ ಸದರಿ ಯುವಕನ ವಿರುದ್ಧ ಪೋಲಿಸ್ ದೂರು ನೀಡಿದ್ದಾಳೆ.