ಸುದ್ಧಿಕನ್ನಡ ವಾರ್ತೆ
Goa: ಗೋವಾ ಅನ್ಮೋಡ್ ಚೆಕ್ ಪೋಸ್ಟ್ ನಲ್ಲಿ ಟ್ರಕ್ ಒಂದನ್ನು ತಪಾಸಣೆ ನಡೆಸಿದಾಗ ಅದರಲ್ಲಿ 45 ಸಾವಿರ ರೂ.ಮೌಲ್ಯದ ಗೋವಾ ನಿರ್ಮಿತ ಮದ್ಯ ಪತ್ತೆಯಾಗಿದೆ.
ಮೂಲಗಳ ಆಧಾರದ ಮೇಲೆ ಅಬಕಾರಿ ಇಲಾಖೆಗೆ ಅಶೋಕ್ ಲೇಲ್ಯಾಂಡ್ ಕೆಎ- 32, ಎಎ -8571 ನಂಬರ್ ನ ಗೋವಾ ತಯಾರಿಸಿದ ಮದ್ಯವನ್ನು ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಲಭಿಸಿದೆ. ಅದರಂತೆ ಅಬಕಾರಿ ನಿರೀಕ್ಷಕ ಮಹೇಂದ್ರ ನಾಯ್ಕ ಮಾರ್ಗದರ್ಶನದಲ್ಲಿ ಇಲಾಖೆಯ ನೌಕರರು ಈ ವಾಹನವನ್ನು ತಪಾಸಣೆ ನಡೆಸಿದಾಗ ಬ್ಲೂ ವಿಸ್ಕಿ ಕಂಪನಿಯ 45 ಸಾವಿರ ರೂಪಾಯಿ ಮೌಲ್ಯದ ಮದ್ಯದ ದಾಸ್ತಾನು ಪತ್ತೆಯಾಗಿದೆ.
ಈ ಕ್ರಮದಲ್ಲಿ ಅಬಕಾರಿ ಉಪನಿರೀಕ್ಷಕ ಟಿ.ಬಿ.ಮಲ್ಲನ್, ಅಧಿಕಾರಿ ಎಸ್. ಬನ್ಸೋಡಿ, ಸಂತೋಷ ಸುಬ್ಬಣ್ಣವರ್ ಮಹಾಂತೇಶ, ರವಿ ಸಂಕಣ್ಣನವರ್ ಭಾಗವಹಿಸಿದ್ದರು. ಈ ಪ್ರಕರಣದಲ್ಲಿ ಚಾಲಕ ಬಿಜಾಪುರದ ಸಿಡಂಗಿ ಮೂಲದ ದರೆಪ್ಪ ಬಿರಾದಾರ್ ಎಂಬಾತನನ್ನು ಬಂಧಿಸಲಾಗಿದ್ದು, ಮದ್ಯ ಸಾಗಾಟಕ್ಕೆ ಬಳಸುತ್ತಿದ್ದ 48 ಲಕ್ಷ ಮೌಲ್ಯದ ಅಶೋಕ್ ಲೇಲ್ಯಾಂಡ್ ಟ್ರಕ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.