ಸುದ್ಧಿಕನ್ನಡ ವಾರ್ತೆ
Goa(ವಾಸ್ಕೊ): ಗೋವಾ ರಾಜ್ಯದ ವಾಸ್ಕೊದ ಜುವಾರಿನಗರದಲ್ಲಿರುವ ಶ್ರೀ ಯಲ್ಲಾಲಿಂಗೇಶ್ವರ ಮಠದಲ್ಲಿ 36 ನೇಯ ಪುಣ್ಯದರ್ಶನ ಕಾರ್ಯಕ್ರಮವು ಡಿಸೆಂಬರ್ 21 ರಿಂದ ಡಿಸೆಂಬರ್ 25 ರ ವರೆಗೆ ನಡೆಯಲಿದೆ. ಈ ಬೃಹತ್ ಜಾಜ್ರಾ ಮಹೋತ್ಸದ ಹ್ಯಾಂಡ್ ಬಿಲ್ ನ್ನು ಶ್ರೀಮಠದಲ್ಲಿ ಪೂಜೆ ಸಲ್ಲಿಸಿ ಬಿಡುಗಡೆಗೊಳಿಸಲಾಯಿತು.(The 36th Punyadarshan program at Sri Yallalingeswara Math will be held from December 21 to December 25).

ಈ ಸಂದರ್ಭದಲ್ಲಿ ಕಸಾಪ ಗೋವಾ ರಾಜ್ಯಾಧ್ಯಕ್ಷ ಡಾ.ಸಿದ್ಧಣ್ಣ ಮೇಟಿ, ಗೋವಾ ರಾಜ್ಯ ಕರ್ನಾಟಕ ರಾಜ್ಯೋತ್ಸವ ಸಮಿತಿಯ ಸಂಘಟನಾ ಅಧ್ಯಕ್ಷ ರಾಜೇಶ್ ಶೆಟ್ಟಿ, ಶ್ರೀ ಯಲ್ಲಾಲಿಂಗೇಶ್ವರ ಮಠದ ಅರ್ಚಕರಾದ ಕಂಬಳಯ್ಯ ಮಹಾರಾಜರು ಹ್ಯಾಂಡ್ ಬಿಲ್ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಮಲ್ಲೇಶ ಬಿರಾದಾರ್, ಕಸಾಪ ಗೋವಾ ರಾಜ್ಯ ಗೌ.ಕಾರ್ಯದರ್ಶಿ ನಾಗರಾಜ ಗೋಂದಕರ್, ಮಾಂತೇಶ್ ಬಿರಾದಾರ್, ಸಂಗಣ್ಣ ಗೌಡರ್, ಹನುಮಂತ ಕಡ್ಲಿಮಟ್ಟಿ, ಕೃಷ್ಣ ಚೌಹಾಣ್, ಶಂಕರ ಭೂಷಿ, ರಮೇಶ ಕಂಬಳಿ, ಹುಲ್ಲೇಶ ಆಳಂದಿ, ಈರಣ್ಣ ಮದರ್ ಕಂಡಿ, ಪರಶುರಾಮ ಗೊಳಸಂಗಿ, ಲಕ್ಷ್ಮಣ ಬಳುತಿ, ಮತ್ತಿತರರು ಉಪಸ್ಥಿತರಿದ್ದರು.

ಈ ಪುಣ್ಯದರ್ಶನ ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಶ್ರೀ ಷಡಕ್ಷರಿ ಶಿವಯೋಗಿ ಡಾ|| ಮುರುಘರಾಜೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿದೆ. ಈ ಬೃಹತ್ ಜಾತ್ರೆಯಲ್ಲಿ ಗೋವಾ ರಾಜ್ಯದ ಮೂಲೆ ಮೂಲೆಯಿಂದ ಮಾತ್ರವಲ್ಲದೆಯೇ ಕರ್ನಾಟಕದ ವಿವಿಧ ಭಾಗಗಳಿಂದಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.