ಸುದ್ಧಿಕನ್ನಡ ವಾರ್ತೆ
ಪಂಡರಪುರಕ್ಕೆ ತೆರಳಿ ವಿಠುರಾಯನ ದರ್ಶನ ಯಾತ್ರೆಗೆ ತೆರಳುವ ಸಿದ್ಧತೆಯಲ್ಲಿದ್ದ ವಯೋವೃದ್ಧ ಮಹಿಳೆಗೆ ಆ ಕನಸು ಕೊನೆಗೂ ನನಸಾಗಲೇ ಇಲ್ಲ.
ಗೋವಾದ ಬಿಚೋಲಿ ತಾಲೂಕಿನ ಮಯೆಮ್ ನ ಹಳದಣವಾಡಿಯ 65 ವರ್ಷದ ಸುಧಾ ಚಂದ್ರಕಾಂತ ಚೋಡಣಕರ್ ಈ ವಯೋವೃದ್ಧ ಮಹಿಳೆ ಬಿಚೋಲಿ ಮಾರುಕಟ್ಟೆಯಲ್ಲಿ ಗುರುವಾರ ಇದ್ದಕ್ಕಿದ್ದತೆಯೇ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಈಕೆ ಹೃದಯಾಘಾತದಿಂದ ಸಾವನ್ನಪ್ಪಿರುವುದು ಬಹುತೇಕ ಖಚಿತವಾಗಿದೆ.
ಸುಧಾ ಚೋಡಣಕರ್ ಈಕೆಯ ಪಾರ್ಥಿವ ಶರೀರವನ್ನು ಗುರುವಾರ ಸಂಜೆ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಈ ಮಹಿಳೆಯು ಗುರುವಾರ ರಾತ್ರಿ ಇತರ ಭಕ್ತಾದಿಗಳೊಂದಿಗೆ ಪಂಡರಪುರ ಯಾತ್ರೆಗೆ ತೆರಳುವವಳಿದ್ದಳು. ಯಾತ್ರೆಗೆ ಅಗತ್ಯವಿರುವ ವಸ್ತುಗಳ ಖರೀದಿಗಾಗಿ ಈ ಬಿಚೋಲಿಯ ಮಾರುಕಟ್ಟೆಗೆ ಬದಿದ್ದಳು. ಆದರೆ ದುರಾದೃಷ್ಠವಶಾತ್ ಈಕೆ ಪಂಡರಪುರ ಯತ್ರೆಗೆ ತೆರಳುವ ಕನಸು ನನಸಾಗಲೇ ಇಲ್ಲ, ಯಾತ್ರೆಗೆ ತೆರಳುವ ದಿನದಂದೇ ಈಕೆ ಕೊನೆಯುಸಿರೆಳೆದಿದ್ದಾಳೆ.