ಸುದ್ಧಿಕನ್ನಡ ವಾರ್ತೆ
Goa: ನವೆಂಬರ್ 20 ರಿಂದ 28 ರ ವರೆಗೆ ಪಣಜಿಯಲ್ಲಿ ನಡೆಯಲಿರುವ 55 ನೇಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಆಸ್ಟ್ರೇಲಿಯಾವನ್ನು ಕಂಟ್ರಿ ಫೋಕಸ್ ಆಗಿ ಆಯ್ಕೆ ಮಾಡಲಾಗಿದೆ. ಇದರಿಂದಾಗಿ ಪ್ರಸಕ್ತ ಚಲನಚಿತ್ರೋತ್ಸವದಲ್ಲಿ ಆಸ್ಟ್ರೇಲಿಯಾದ ಆಯ್ದ ಹೆಚ್ಚಿನ ಚಲನಚಿತ್ರಗಳು ಪ್ರದರ್ಶನಗೊಳ್ಳಲಿದೆ.
ಕಂಟ್ರಿ ಫೋಕಸ್ ಇದು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಒಂದು ಪ್ರಮುಖ ವಿಭಾಗವಾಗಿದೆ. ಈ ಕಂಟ್ರಿ ಫೋಕಸ್ ವಿಭಾಗದಲ್ಲಿ ಆಸ್ಟ್ರೇಲಿಯಾದ ಆಯ್ದ 7 ಚಲನಚಿತ್ರಗಳು ಪ್ರದರ್ಶನಗೊಳ್ಳಲಿದೆ. ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಫಿಲ್ಮ ಬಜಾರ್ ನಲ್ಲಿಯೂ ಪ್ರಸಕ್ತ ಬಾರಿ ಆಸ್ಟ್ರೇಲಿಯಾ ಚಲನಚಿತ್ರದ ದೊಡ್ಡ ಯೋಗದಾನವಿರಲಿದೆ.
ಗೋವಾದಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 70 ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.