ಸುದ್ಧಿಕನ್ನಡ ವಾರ್ತೆ
Goa: ಜಾರ್ಖಂಡ್ ದಿಂದ ಗೋವಾಕ್ಕೆ ಬರುತ್ತಿದ್ದ ವಾಸ್ಕೊ-ದ-ಗಾಮಾ ಸಾಪ್ತಾಹಿಕ ಎಕ್ಸಪ್ರೆಸ್ ಟ್ರೇನ್ ನ ಎಸಿ ಕೋಚ್ ನಲ್ಲಿ ಸರ್ಪ ಪ್ರತ್ಯಕ್ಷವಾಗಿದ್ದು ಪ್ರಯಾಣಿಕರೆಲ್ಲ ಬೆಚ್ಚಿಬಿದ್ದಿದ್ದಾರೆ. ಈ ಕೋಚ್ ನಿಂದ ಹೊರಬಿದ್ದು ಸಹಾಯಕ್ಕಾಗಿ ಪ್ರಯಾಣಿಕರು ಕೂಗಿದ್ದಾರೆ. ಈ ವೀಡಿಯೊ ಸದ್ಯ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.( All the passengers were shocked by the appearance of a snake in the AC coach of the Vasco da Gama weekly express train from Jharkhand to Goa).
ಈ ಸರ್ಪವನ್ನು ಹಿಡಿದು ನಂತರ ಸುರಕ್ಷಿತವಾಗಿ ಹೊರಕ್ಕೆ ಬಿಡಲಾಗಿದೆ. ಜಾರ್ಖಂಡ್ -ವಾಸ್ಕೊ-ದ-ಗಾಮಾ ಎಕ್ಸಪ್ರೆಸ್ ರೈಲಿನಲ್ಲಿ ಅಕ್ಟೋಬರ್ 21 ರಂದು ಎಸಿ ಕೋಚ್ ನಲ್ಲಿ ಈ ಘಟನೆ ನಡೆದಿದೆ. ಅಂಕಿತಕುಮಾರ್ ಸಿನ್ಹಾ ಎಂಬ ವ್ಯಕ್ತಿಯೋರ್ವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಟ್ರೇನ್ ನಂ 17322 ಎಕ್ಸಪ್ರೆಸ್ ರೈಲಿನಲ್ಲಿ ಈ ಘಟನೆ ನಡೆದಿದೆ.