ಸುದ್ಧಿಕನ್ನಡ ವಾರ್ತೆ
Goa: ಗೋವಾಕ್ಕೆ ಬಂದು ಇಲ್ಲಿನ ಹೋಟೆಲ್ ನಲ್ಲಿ ಕರ್ನಾಟಕದ ಇಬ್ಬರು ಪ್ರವಾಸಿಗರು ಆತ್ಮಹತ್ಯೆಗೆ ಯತ್ನಿಸಿದ ಆತಂಕಕಾರಿ ಘಟನೆ ಗೋವಾದ ಕಲಂಗುಟ್ ನಲ್ಲಿ ನಡೆದಿದೆ. ಈ ಪೈಕಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು ಮಹಿಳೆಯೋರ್ವಳ ಸ್ಥಿತಿ ಚಿಂತಾಜನಕವಾಗಿದೆ. (Goa’s Calangute where two tourists from Karnataka tried to commit suicide after coming to Goa. Out of these, one person has died and the condition of a woman is critical).
ಕಲಂಗುಟ್ ಸಮೀಪದ ಹೋಟೆಲ್ ಬೋನಾಂಜಾದಲ್ಲಿ ಮಹೇಶ್ ಸುಂತನುರೆ (45, ಕರ್ನಾಟಕ) ಈ ವ್ಯಕ್ತಿ ಹೋಟೆಲ್ ರೂಂನಲ್ಲಿ ನೇಣಿಗೆ ಬಲಿಯಾಗಿದ್ದಾನೆ. ಈ ವ್ಯಕ್ತಿಯೊಂದಿಗೆ ಇದ್ದ ಸೋನಾಲಿ (25, ಕನಾಟಕ) ಈಕೆ ನೇಣು ಬಿಗಿದುಕೊಂಡಿದ್ದರಿಂದ ಈಕೆಯ ಸ್ಥಿತಿ ಗಂಭೀರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಪೋಲಿಸರು ಘಟನಾ ಸ್ಥಳಕ್ಕೆ ಆಗಮಿಸಿ ಸೋನಾಲಿ ಈಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಲಭ್ಯವಾದ ಮಾಹಿತಿಯ ಅನುಸಾರ- ಮಹೇಶ ಮತ್ತು ಸೋನಾಲಿ ಈ ಇಬ್ಬರು ಕರ್ನಾಟಕ ಮೂಲದವರು ಅಕ್ಟೋಬರ್ 19 ರಂದು ಹೋಟೆಲ್ ಬೋನಾಂಜಾದ ರೂಂ ಗೆ ಆಗಮಿಸಿದ್ದರು. ಇವರು 20 ರಂದು ಚೆಕ್ ಔಟ್ ಮಾಡುವುದಾಗಿ ಹೇಳಿದ್ದ ಇವರು ಒಂದು ದಿನ ಅವಧಿ ವಿಸ್ತರಣೆ ಮಾಡಿದ್ದರು.
ಸೋನಾಲಿ ಇವಳು ವಿವಾಹಿತ ಮಹಿಳೆಯಾಗಿದ್ದು, ಕಳೆದ ನಾಲ್ಕು ವರ್ಷಗಳ ಹಿಂದೆ ಈಕೆಯ ವಿವಾಹವಾಗಿತ್ತು ಎನ್ನಲಾಗಿದೆ. ಮಹೇಶ ಈತ ಕೂಡ ವಿವಾಹಿತವಾಗಿದ್ದು ಈತನಿಗೆ ಹೆಂಡತಿ ಹಾಗೂ ಮೂವರು ಮಕ್ಕಳಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಅಕ್ರಮ ಸಂಬಂಧ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ಹೆಚ್ಚಿನ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.