ಸುದ್ಧಿಕನ್ನಡ ವಾರ್ತೆ
Goa: ಗೋವಾದಲ್ಲಿ ಮತ್ತೆ ಧಾರಾಕಾರ ಮಳೆ ಆರಂಭಗೊಂಡಿದೆ.( Heavy rain again in Goa) ಬುಧವಾರ ರಾತ್ರಿಯಿಡಿ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಸಮುದ್ರದ ನೀರಿನ ಮಟ್ಟ ಏರಿಕೆಯಾಗಿದೆ. ನದಿಯ ನೀರಿನ ಮಟ್ಟ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿ ನದಿ ತೀರ ಪ್ರದೇಶಗಳಲ್ಲಿ ಪ್ರವಾಹ ಸೃಷ್ಠಿಯಾಗಿದೆ. ಸಮುದ್ರ ನೀರಿನ ಮಟ್ಟ ಏರಿಕೆಯಾಗಿ ಮಜೋರ್ಡಾದಲ್ಲಿ ಬಾರ್ ಮತ್ತು ರೆಸ್ಟೊರೆಂಟ್ ( Shaks )ಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟೀಯಾಗಿದೆ.
ನಾಲೆಯಲ್ಲಿ ಕೊಚ್ಚಿಹೋದ ಬಾಲಕ…!
ಗೋವಾ(Goa) ರಾಜ್ಯಾದ್ಯಂತ ಭಾರಿ ಮಳೆ ಮುಂದುರೆದಿದೆ. ಬುಧವಾರ ಸಂಜೆ ಟ್ಯೂಶನ್ ಮುಗಿಸಿ ಮನೆಗೆ ವಾಪಸ್ಸಾಗುವಾಗ ನಾಲೆಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ನಾಲೆಯಲ್ಲಿ ಬಾಲಕ ಕೊಚ್ಚಿಹೋದ ಘಟನೆ (The incident of the boy drowning in the canal) ಗೋವಾದ ತಿಸ್ಕ-ಉಜಗಾಂವನಲ್ಲಿ ಸಂಭವಿಸಿದೆ. ಬಧವಾರ ರಾತ್ರಿಯಿಡಿ ಈ ಬಾಲಕನಿಗಾಗಿ ಪೊ<ಡಾ ಅಗ್ನಿಶಾಮಕ ದಳದ ಸಿಬ್ಬಂಧಿಗಳು ಶೋಧ ಕಾರ್ಯ ಕೈಗೊಂಡರೂ ಕೂಡ ಈ ಬಾಲಕನನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎನ್ನಲಾಗಿದೆ.