ಸುದ್ಧಿಕನ್ನಡ ವಾರ್ತೆ
Goa: ಪ್ರಸಿದ್ಧ ಕ್ರಿಕೇಟ್ ಆಟಗಾರ ಮಹಮ್ಮದ್ ಖೈಫ್ ರವರು ತಮ್ಮ ಕುಟುಂಬದೊಂದಿಗೆ ಗೋವಾಕ್ಕೆ ಬಂದಿದ್ದು ತಮ್ಮ ಕುಟುಂಬದೊಂದಿಗೆ ಗೋವಾದಲ್ಲಿ ಮೀನುಗಾರಿಕೆಯ ಅನುಭವ ಪಡೆದುಕೊಂಡಿದ್ದಾರೆ. ಮಹಮ್ಮದ್ ಖೈಫ್ ರವರು ಪತ್ನಿ ಪೂಜಾ ಮತ್ತು ಮಗಳಾದ ಇವ್ಹಾ ರವರೊಂದಿಗೆಗೆ ಗೋವಾದ ಬಾಣಾವಲಿ ಎಕ್ಸಾಟಿಕಾದಲ್ಲಿ ತಂಗಿದ್ದಾರೆ.

ಮಹಮ್ಮದ್ ಖೈಫ್ ರವರು ಗೋವಾದ ಬಾಣಾವಲಿ ಸಮುದ್ರ ತೀರಕ್ಕೆ ಆಗಮಿಸಿದ್ದರು. ಆದರೆ ಸಂಜೆ ಸೂರ್ಯಾಸ್ತವಾಗಿದ್ದರಿಂದ ಜಲಕ್ರೀಡೆಗೆ ಬೋಟ್ ಚಾಲಕರು ನೀರಿಗೆ ಇಳಿಯಲು ಸಾಧ್ಯವಿಲ್ಲ ಎಂದು ಹೇಳಿದರು. ಇದರಿಂದಾಗಿ ಮಹಮ್ಮದ್ ಖೈಫ್ ರವರಿಗೆ ನಿರಾಸೆಯುಂಟಾಯಿತು. ಅಷ್ಟರಲ್ಲೇ ಅಲ್ಲಿಯೇ ಇದ್ದ ಪೆಲೆ ಫರ್ನಾಂಡಿಸ್ ರವರು ನಾನು ಮೀನು ಹಿಡಿಯಲು ಸಮುದ್ರಕ್ಕೆ ಇಳಿಯುತ್ತಿದ್ದೆನೆ ನೀವು ನನ್ನೊಂದಿಗೆ ಬರುವಿರಾ..? ಎಂದು ಕೇಳಿದರು. ಅದಕ್ಕೆ ಮಹಮ್ಮದ್ ಖೈಫ್ ರವರು ಸಮ್ಮತಿ ಸೂಚಿಸಿ ಆನಂದದಿಂದ ತಮ್ಮ ಕುಟುಂಬದೊಂದಿಗೆ ಪೆಲೆ ರವರ ಬೋಟ್ ಗೆ ಹತ್ತಿದರು.

ಮೀನುಗಾರಿಕಾ ಬೋಟ್ ಗೆ ಹತ್ತಿದ ನನಗೆ ವಿಶೇಷ ಅನುಭವವೇ ಆಯಿತು ಎಂದು ಮಹಮ್ಮದ್ ಖೈಫ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಮೀನುಗಾರರ ಈ ವಿಶ್ವ ನಮ್ಮ ಕ್ರಿಕೇಟ್ ವಿಶ್ವಕ್ಕಿಂತ ಅಧಿಕ ರೋಮಾಂಚನವಾಗಿದೆ ಎಂದು ಅವರು ಆನಂದ ವ್ಯಕ್ತಪಡಿಸಿದರು.