ಸುದ್ಧಿಕನ್ನಡ ವಾರ್ತೆ
Goa: ಗೋವಾದಲ್ಲಿ ನವೆಂಬರ್ 10 ರಂದು ಆಯೋಜಿಸಿರುವ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರವರನ್ನು ಆಮಂತ್ರಿಸಲಾಗಿದೆ.

ಗೋವಾದ ಕರ್ನಾಟಕ ರಾಜ್ಯೋತ್ಸವ ಸಮೀತಿಯ ಗೌ.ಅಧ್ಯಕ್ಷರಾದ ಡಾ.ಸಿದ್ಧಣ್ಣ ಮೇಟಿ, ಸಂಘಟನಾ ಅಧ್ಯಕ್ಷ ರಾಜೇಶ್ ಶೆಟ್ಟಿ, ಕಾರ್ಯದರ್ಶಿ ಸುರೇಶ್ ರಜಪೂತ್, ಕರ್ನಾಟಕ ಪಬ್ಲಿಕ್ ಸರ್ವೀಸ್ ಕಮೀಶನರ್ ಕುರುಬ ಮುಕಡಪ್ಪ, ಕಸಾಪ ಗೋವಾ ರಾಜ್ಯ ಗೌ.ರ್ಯದರ್ಶಿ ನಾಗರಾಜ್ ಗೋಂದಕರ್ ರವರು ಬೆಂಗಳೂರಿಗೆ ತೆರಳಿ ಎಚ್. ಡಿ ಮುಕಾರಸ್ವಾಮಿ ರವರನ್ನು ಭೇಟಿ ಮಾಡಿ ಗೋವಾದಲ್ಲಿ ಆಯೋಜಿಸಿರುವ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಮಂತ್ರಿಸಿದರು.