ಸುದ್ಧಿಕನ್ನಡ ವಾರ್ತೆ
Goa:ಪಟ್ಲ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಸತೀಶ್ ಪಟ್ಲ ರವರು ಸದ್ಯ ಗೋವಾ ಪ್ರವಾಸದಲ್ಲಿದ್ದಾರೆ. ಇನ್ನು ಎರಡು ದಿನಗಳ ಕಾಲ ಅವರು ಗೋವಾದಲ್ಲಿ ವಾಸ್ತವ್ಯ ಹೂಡಲಿದ್ದು, ಅಕ್ಟೋಬರ್ 15 ರಂದು ಅವರ ಅಭಿಮಾನಿ9ಗಳು ಮತ್ತು ಸಮೀತಿಯ ಸದಸ್ಯರು ಭೇಟಿಯಾಗುವ ಕಾರ್ಯಕ್ರಮ ಇಟ್ಟುಕೊಳ್ಳಲಾಗಿದೆ ಎಂದು ಗೋವಾ ಪಟ್ಲ ಫೌಂಡೇಶನ್ ಅಧ್ಯಕ್ಷ ಗಣೇಶ್ ಶೆಟ್ಟಿ ಇರ್ವತ್ತೂರು ಮಾಹಿತಿ ನೀಡಿದ್ದಾರೆ.
ಗೋವಾಕ್ಕೆ ಆಗಮಿಸಿರುವ ಸತೀಶ್ ಪಟ್ಲ ರವರನ್ನು ಭೇಟಿಯಾಗುವವರಿದ್ದರೆ ಅಕ್ಟೋಬರ್ 15 ರಂದು ಸಂಜೆ 5 ಗಂಟೆಗೆ ಉತ್ತರ ಗೋವಾದ ವಿಹಸ್ತಾ ಹೋಟೆಲ್ ಸಂಗೋಲ್ಡಾದಲ್ಲಿ ಭೇಟಿಯಾಗಬಹುದು ಎಂದು ಗಣೇಶ್ ಶೆಟ್ಟಿ ಇರ್ವತ್ತೂರು ಮಾಹಿತಿ ನೀಡಿದ್ದಾರೆ.