ಸುದ್ಧಿಕನ್ನಡ ವಾರ್ತೆ
Goa: ತೆಲಂಗಾಣದ ಸಿಕಂದರಾಬಾದ್ ನಿಂದ ಗೋವಾಕ್ಕೆ ಹೊಸದಾಗಿ ರೈಲು ಓಡಾಟ ಆರಂಭಗೊಂಡಿದೆ. ದಕ್ಷಿಣ ಮಧ್ಯ ರೈಲ್ವೆ ಕಳೆದ ವಾರ ಈ ಮಾರ್ಗಕ್ಕೆ ಹೊಸದಾಗಿ ರೈಲು ಓಡಾಟ ಆರಂಭಿಸಿದೆ. ಅಕ್ಟೋಬರ್ 9 ರಿಂದ ಸಿಕಂದರಾಬಾದ್-ವಾಸ್ಕೊ-ದ-ಗಾಮಾ ಈ ರೈಲು ಓಡಾಟ ಆರಂಭಗೊಂಡಿದೆ.
ದಕ್ಷಿಣ ಮಧ್ಯ ರೈಲ್ವೆ ನೀಡಿರುವ ಮಾಹಿತಿಯ ಅನುಸಾರ- ಸಿಕಂದರಾಬಾದ್-ವಾಸ್ಕೊ-ದ-ಗಾಮಾ ರೈಲು ವಾರಕ್ಕೆ ಎರಡು ದಿನ ಓಡಾಟ ನಡೆಸಲಿದೆ. ಬುಧವಾರ ಮತ್ತು ಶುಕ್ರವಾರ ಈ ರೈಲು ಓಡಾಟ ನಡೆಸುತ್ತಿದ್ದು ಈ ರೈಲು ಓಡಾಟದಿಂದ ಈ ಎರಡೂ ರಾಜ್ಯಗಳ ನಡುವೆ ರೈಲ್ವೆ ಮಾರ್ಗದ ಮೂಲಕ ನೇರ ಸಂಪರ್ಕ ಲಭಿಸಿದಂತಾಗಿದೆ. ಇಷ್ಟೇ ಅಲ್ಲದೆಯೇ ಪ್ರವಾಸೋದ್ಯಮದ ದೃಷ್ಠಿಯಿಂದಲೂ ಈ ಮಾರ್ಗಕ್ಕೆ ಹೆಚ್ಚಿನ ಅನುಕೂಲವಾಗಲಿದೆ.
ಸಿಕಂದರಾಬಾದ್-ವಾಸ್ಕೊ-ದ-ಗಾಮಾ ರೈಲು ಕ್ರಮಾಂಕ 1709 ವೀಕ್ಲಿ ಎಕ್ಸಪ್ರೆಸ್ ರೈಲು ಪ್ರತಿ ಬುಧವಾರ ಮತ್ತು ಶುಕ್ರವಾರ ಬೆಳಿಗ್ಗೆ 10 ಗಂಟೆ 5 ನಿಮಿಷಕ್ಕೆ ಸಿಕಂದರಾಬಾದ್ ನಿಂದ ಹೊರಡಲಿದೆ. ಮರುದಿನ ಬೆಳಿಗ್ಗೆ 5.45 ಕ್ಕೆ ಗೋವಾ ವಾಸ್ಕೊ-ದ-ಗಾಮಾ ರೈಲು ನಿಲ್ದಾಣಕ್ಕೆ ಬಂದು ತಲುಪಲಿದೆ.
ಸಿಕಂದರಾಬಾದ್-ವಾಸ್ಕೊ-ದ-ಗಾಮಾ ಎಕ್ಷಪ್ರೆಸ್ ರೈಲಿನಲ್ಲಿ ಒಟ್ಟೂ 21 ಆಧುನಿಕ ಎಲ್ ಎಚ್ ಬಿ ಭೋಗಿಗಳಿವೆ. ಈ ರೈಲ್ವೆಯಲ್ಲಿ ಪ್ರಥಮ ಎಸಿ ವರ್ಷ, ಎಸಿ 2-ಟಿಯರ್, ಎಸಿ 3 ಟಿಯರ್, ಸ್ಲೀಪರ್ ಕ್ಲಾಸ್ ಹಾಗೂ ಸಾಮಾನ್ಯ ದ್ವಿತೀಯ ಶ್ರೇಣಿಯ ಕೋಚ್ ಒಳಗೊಂಡಿದೆ.