ಸುದ್ಧಿಕನ್ನಡ ವಾರ್ತೆ
Goa: ಗೋವಾದ ಕಾಣಕೋಣದಲ್ಲಿ ಹೊರ ರಾಜ್ಯದ ಕೂಲಿ ಕಾರ್ಮಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಕಳೆದ ವರ್ಷ ಕಾಣಕೋಣ ಪೋಲಿಸ್ ಠಾಣೆಯಲ್ಲಿ 1242 ಕಾರ್ಮಿಕರು ತಮ್ಮ ದಾಖಲೆ ನೋಂದಾಯಿಸಿಕೊಂಡಿದ್ದರು. ಆದರೆ ಪ್ರಸಕ್ತ ವರ್ಷ ಈಗಾಗಲೇ 1638 ಕಾರ್ಮಿಕರು ಕಾಣಕೋಣ ಪೋಲಿಸ್ ಠಾಣೆಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದರಿಂದಾಗಿ ಗೋವಾದ ಕಾಣಕೋಣದಲ್ಲಿ ಕಾರ್ಮಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ಕಂಡುಬರುತ್ತಿದೆ. ಗೋವಾದಲ್ಲಿ ಎಲ್ಲಡೆ ಹೊರ ರಾಜ್ಯದವರ ಸಂಖ್ಯೆ ಹೆಚ್ಚಳವಾಗಿರುವುದು ಕಂಡುಬರುತ್ತಿದೆ.
ಗೋವಾ ರಾಜ್ಯದಲ್ಲಿ ಕೊಲೆ, ಧರೋಡೆ, ಬಲಾತ್ಕಾರ ಹೀಗೆ ಅಪರಾಧ ಪ್ರಕರಣಗಳಲ್ಲಿ ಹೆಚ್ಚಳವಾಗಿದೆ. ಇದರಿಂದಾಗಿ ಗೋವಾದಲ್ಲಿ ಬಾಡಿಗೆ ಮನೆಯಲ್ಲಿರುವ ಹೊರ ರಾಜ್ಯದ ಜನರ ಎಲ್ಲ ದಾಖಲಾತಿಯನ್ನು ಆಯಾ ಸ್ಥಳೀಯ ಪೋಲಿಸ್ ಠಾಣೆಯಲ್ಲಿ ಪಡೆಯಲಾಗುತ್ತಿದೆ. ಈ ದಾಖಲೆ ನೀಡಲು ತಪ್ಪಿದಲ್ಲಿ 10,000 ರೂ ದಂಡ ಹಾಗೂ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಗೋವಾ ಸರ್ಕಾರ ನೀಡಿದೆ. ಇದರಿಂದಾಗಿ ಗೋವಾದ ಎಲ್ಲ ಪೋಲಿಸ್ ಠಾಣೆಗಳಲ್ಲಿ ಗೋವಾದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿರುವ ಹೊರ ರಾಜ್ಯದ ಜನರ ದಾಖಲಾತಿಯನ್ನು ಒಡೆಯಲಾಗುತ್ತಿದೆ. ಕೇವಲ ಕಾಣಕೋಣದಲ್ಲಿ ಮಾತ್ರವಲ್ಲದೆಯೇ ಗೋವಾದ ಎಲ್ಲಡೆ ಹೊರ ರಾಜ್ಯದ ಜನರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದು ಕಂಡುಬರುತ್ತಿದೆ.
ಗೋವಾ ಕಾಣಕೋಣ ಭಾಗದಲ್ಲಿ ಹೊರ ರಾಜ್ಯದ ಕಾರ್ಮಿಕರ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಕಾಣಕೋಣ ಪೋಲಿಸ್ ನಿರೀಕ್ಷಕ ಹರೀಷ ರಾವುತ್ ದೇಸಾಯಿ ಮಾಹಿತಿ ನೀಡಿದ್ದಾರೆ.