ಸುದ್ಧಿಕನ್ನಡ ವಾರ್ತೆ
Goa: ಗೋವಾ ರಾಜ್ಯಾದ್ಯಂತ ವಾರಸುದಾರರಿಲ್ಲದ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರಕ್ಕೆ ಅಧಿಕಾರ ನೀಡುವ ಕಾನೂನನ್ನು ಅಧಿಸೂಚನೆ ಹೊರಡಿಸಿದೆ. ಇದು ಈಗ ಕಾನೂನುಬದ್ಧ ವಾರುಸುದಾರರಿಲ್ಲದ ವ್ಯಕ್ತಿಗಳ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರಕ್ಕೆ ಅನುವು ಮಾಡಿಕೊಟ್ಟಿದೆ. ಈ ಕಾಯ್ದೆಯು ಅಂತಹ ಆಸ್ತಿಯ ಉಸ್ತುವಾರಿ, ನಿರ್ವಹಣೆ, ಆಡಳಿತ, ಮೇಲ್ವಿಚಾರಣೆ, ಸ್ವಾಧೀನ ಹೊಂದಲು ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ.
ಸರ್ಕಾರದ ಸ್ವಾಧೀನದಲ್ಲಿರುವ ಯಾವುದೇ ಸ್ಥಿರಾಸ್ತಿಯನ್ನು ಹತ್ತು ವರ್ಷ ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ವರೆಗೆ ಸರ್ಕಾರದ ಸ್ವಾಧೀನದಲ್ಲಿದ್ದ ಹೊರತು ಅದನ್ನು ಮಾಮೂಲಿಯಾಗಿ ಮಾರಾಟ ಮಾಡುವಂತಿಲ್ಲ ಎಂದು ಈ ಖಾಯ್ದೆ ಹೇಳುತ್ತದೆ. ಈ ಸಂಬಂಧ ನೋಟಿಸ್ ಜಾರಿ ಮಾಡಿದ ನಂತರ ವಿವಾದಿತ ಆಸ್ತಿಯನ್ನು ಹಕ್ಕುದಾರರಿಗೆ ಹಕ್ಕು ಪಡೆಯಲು ಸರ್ಕಾರ ಒಂದು ವರ್ಷದ ಅವಧಿಯನ್ನು ನೀಡುತ್ತದೆ. ಇದೇ ವೇಳೆ ನಕಲಿ ದಾಖಲೆ ಸೃಷ್ಠಿಸಿ ವಿಧುರ ಅಥವಾ ಮೃತ ವ್ಯಕ್ತಿಯ ಹೆಸರಿನಲ್ಲಿ ಭೂ ಪರಿವರ್ತನೆ ಮಾಡಿರುವ ಹಲವು ಪ್ರಕರಣಗಳು ನಡೆದಿವೆ.
ಭೂಕಬಳಿಕೆ ಪ್ರಕರಣದಲ್ಲಿ ಗೋವಾ ರಾಜ್ಯ ಸರ್ಕಾರ SIT ನೇಮಿಸಿದ್ದು ಆಯೋಗದಿಂದ ವಿಚಾರಣಾ ವರದಿ ತರಿಸಿಕೊಂಡಿದೆ. ಪ್ರಸಕ್ತ ಗೋವಾ ಮುಂಗಾರು ಅಧಿವೇಶನದಲ್ಲಿ ಈ ತಿದ್ಧುಪಡಿ ಮಸೂದೆಯನ್ನು ಅಂಗೀಕರಿಸಲಾಯಿತು. ಕಾನೂನು ಬದ್ಧ ಉತ್ತರಾಧಿಕಾರಿಗಳು ಅಥವಾ ಮಾಲೀಕರಿಲ್ಲದ ಭೂಮಿಯನ್ನು ವಷಪಡಿಸಿಕೊಳ್ಳಲು ಸರ್ಕಾರಕ್ಕೆ ಈ ಕಾನೂನು ಅಧಿಕಾರ ನೀಡುತ್ತದೆ, ರಾಜ್ಯಪಾಲರ ಒಪ್ಪಿಗೆ ಬಳಿಕ ಇದೀಗ ಈ ಸೂಚನೆ ನೀಡಲಾಗಿದೆ.
ಯಾವ ಉದ್ದೇಶಕ್ಕಾಗಿ ಸದರಿ ಭೂಮಿಯನ್ನು ಅನುಮೋದಿಸಲಾಗಿದೆಯೋ ಅದನ್ನು ಹೊರತುಪಡಿಸಿ ಇತರ ಯಾವುದೇ ಉದ್ದೇಶಕ್ಕಾಗಿ ಕೋಮುನಿದಾದ್ ಭೂಮಿಯನ್ನು ಬಳಸುವುದನ್ನು ತಡೆಯಲು ಸುಗ್ರೀವಾಜ್ಞೆ ಹೊರಡಿಸಿದ್ದು , ಅಧಿಸೂಚನೆ ಹೊರಡಿಸಲಾಗಿದೆ.
ಗೋವಾ ರಾಜ್ಯದಲ್ಲಿ ಅಕ್ರಮ ಭೂ ಕಬಳಿಕೆ ಮತ್ತು ಭೂ ಪರಿವರ್ತನೆಯಂತಹ ಅಪರಾಧಗಳನ್ನು ತಡೆಯಲು ಗೋವಾ ರಾಜ್ಯ ಸರ್ಕಾರ ಹೊಸ ಕಾನೂನುಗಳನ್ನು ತಿದ್ಧುಪಡಿ ತರುತ್ತಿದ್ದು, ಅಕ್ರಮ ಭೂ ಮಾಫಿಯಾದಲ್ಲಿ ತೊಡಗಿಕೊಂಡಿರುವವರು ಭಯಭೀತರಾಗುವಂತೆ ಮಾಡಿದೆ.