ಸುದ್ಧಿಕನ್ನಡ ವಾರ್ತೆ
Goa:ಕಳೆದ ಸೋಮವಾರ ಮತ್ತು ಮಂಗಳವಾರ ಗೋವಾ ರಾಜ್ಯಾದ್ಯಂತ ಸುರಿದ ಭಾರಿ ಗಾಳಿ ಮಳೆಗೆ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ಇದುವರೆಗೂ ಹಲವೆಡೆ ವಿದ್ಯುತ್ ಸಂಪರ್ಕವಿಲ್ಲದೆಯೇ ಪರದಾಡುವಂತಾಗಿದೆ. ಗೋವಾದ ಗ್ರಾಮೀಣ ಭಾಗದಲ್ಲಿ ಹಲವೆಡೆ ಸದ್ಯ ವಿದ್ಯುತ್ ಪೂರೈಕೆಯಿಲ್ಲದೆಯೇ ಕತ್ತಲಲ್ಲಿ ಕಾಲ ಕಳೆಯುವಂತಾಗಿದೆ.

ಗೋವಾ ರಾಜ್ಯಾದ್ಯಂತ ಕಳೆದ ಎರಡು ದಿನಗಳ ಹಿಂದೆ ಸುರಿದ ಭಾರಿ ಗಾಳಿ ಮಳೆಗೆ. ಹಲವೆಡೆ ಮನೆ, ರಸ್ತೆ ಮೇಲೆ ಮರ ಬಿದ್ದು ಆಸ್ತಿಪಾಸ್ತಿ ಹಾನಿಯಾಗಿದೆ.ರಸ್ತೆಯ ಮೇಲೆ ಮರ ಬಿದ್ದಿದ್ದರಿಂದ ಇಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಗೋವಾದ ವಾಳಪೈ ಭಾಗದಲ್ಲಿ ಭಾರೀ ಮಳೆ ಮತ್ತು ಬಿರುಗಾಳಿಯ ಗಾಳಿಯಿಂದ ಸತ್ತರಿ ತಾಲೂಕಿನಲ್ಲಿ ಹೆಚ್ಚು ಹಾನಿಯಾಗಿದೆ. ತಾಲೂಕಿನ ಗುಳೇಲಿ ಗ್ರಾ.ಪಂ.ನ ಧಮ್ಸೆ ಗ್ರಾಮದ ನಾರಾಯಣ ಸೂರ್ಯ ವಾಘ ಎಂಬುವವರ ಮನೆ ಸೇರಿ ಆಸ್ತಿಪಾಸ್ತಿ ಹಾನಿಗೀಡಾಗಿರುವ ಬಗ್ಗೆ ವರದಿಯಾಗಿದೆ. ಬಿರುಗಾಳಿ ಸಹಿತ ಮಳೆಯಿಂದಾಗಿ ಸರ್ವೆ ನಂ.11/26ರಲ್ಲಿನ ಅವರ ನಿವಾಸದ ಮೇಲೆ ಮರವೊಂದು ಬಿದ್ದಿದ್ದು, ಇದರೊಂದಿಗೆ ಅವರ ಮನೆಗೆ ವಿದ್ಯುತ್ ಸರಬರಾಜು ಮಾಡುವ ಎರಡು ಕಂಬಗಳು ನೆಲಕ್ಕುರುಳಿವೆ.

ಹೆಚ್ಚಿನ ಮಾಹಿತಿ ಪ್ರಕಾರ ನಾಯಕ್ ಅವರ ತೋಟದಲ್ಲಿದ್ದ ಬಾಳೆ, ಅಡಕೆ ಮರಗಳು ಗಾಳಿಯ ರಭಸಕ್ಕೆ ಹಾನಿಗೀಡಾಗಿರುವುದು ಬೆಳಕಿಗೆ ಬಂದಿದೆ. ಇದೇ ವೇಳೆ ಇಲ್ಲಿ ಸಂಚರಿಸಲು ಸರಿಯಾದ ರಸ್ತೆಯೇ ಇಲ್ಲ. ಇದರಿಂದಾಗಿ ಇಲ್ಲಿ ಬಿದ್ದಿರುವ ವಿದ್ಯುತ್ ಕಂಬಗಳನ್ನು ಸರಿಪಡಿಸುವ ಕಾರ್ಯ ಭರದಿಂದ ಸಾಗಬೇಕಿದೆ. ವಿದ್ಯುತ್ ಇಲ್ಲದ ಕಾರಣ ಕತ್ತಲಲ್ಲಿ ದಿನ ಕಳೆಯಬೇಕಾಗಿದೆ. ಸಿಕ್ಕಿರುವ ಮಾಹಿತಿ ಪ್ರಕಾರ ಈ ರಸ್ತೆಯ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಸತ್ತರಿ ತಾಲೂಕಿಗೆ ಉಪಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಹಾನಿ ಪರಿಶೀಲನೆ ನಡೆಸಬೇಕು ಎಂದು ನಾರಾಯಣ ನಾಯ್ಕ ಹಾಗೂ ಅವರ ಕುಟುಂಬಸ್ಥರು ಆಘ್ರಹಿಸಿದ್ದಾರೆ.