ಸುದ್ಧಿಕನ್ನಡ ವಾರ್ತೆ
Goa: ಮಂಗಳವಾರ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ ಗೋವಾದ ಬಾರದೇಸ ತಾಲೂಕು ತತ್ತರಿಸಿ ಹೋಗಿದೆ. ಬಾರದೇಸ ತಾಲೂಕಿನ ಉಸ್ಕೈ ಈ ಮಳೆಯಿಂದ ಹೆಚ್ಚು ಹಾನಿಗೊಳಗಾಗಿದೆ. ಐದು ಕಡೆ ಮರಗಳು ಬಿದ್ದಿರುವ ಬಗ್ಗೆ ವರದಿಯಾಗಿದೆ. ವಿದ್ಯುತ್ ಕಂಬಗಳ ಮೇಲೆ ಮರ ಬಿದ್ದಿದ್ದು, ವಿದ್ಯುತ್ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದ್ದು ಹಲವು ಗಂಟೆ ಕಳೆದರೂ ಕೂಡ ವಿದ್ಯುತ್ ಸಮರ್ಪಕ ಪೂರೈಕೆ ಸಾಧ್ಯವಾಗಿಲ್ಲ ಎನ್ನಲಾಗಿದೆ.

ಸಂತ ಅಂತೋನಿವಾಡದಲ್ಲಿ ಗುಡುಗು ಸಹಿತ ಬಿರುಗಾಳಿ ಮಳೆ ಪರಿಣಾಮ ಹುಣಸೆ ಮರವೊಂದು ಬುಡ ಸಮೇತ ಸುಭಾಷ್ ಪೋಕ್ಲೆ ಅವರ ಮನೆ ಮೇಲೆ ಬಿದ್ದಿದೆ. ಮರ ಬಿದ್ಧ ಪರಿಣಾಮ ಹೈವೋಲ್ಟೇಜ್ ವಿದ್ಯತ್ ಕಂಬ ಮುರಿದು ಬಿದ್ದಿವೆ. ಹಲವು ಮನೆಗಳಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ.

ಹೈವೋಲ್ಟೇಜ್ ವಿದ್ಯುತ್ ತಂತಿಗಳ ಜತೆಗೆ ಕಂಬಗಳು ಮುರಿದು ಬಿದ್ದಿದ್ದರಿಂದ ಇಡೀ ಉಸ್ಕಾಯಿ-ಪಾಳ್ಯ-ಪುಣೋಳ ಹಾಗೂ ಬಸ್ತೋಡ ಪಂಚಾಯಿತಿ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಉಸ್ಕೈಯಲ್ಲಿ ಮುರಿದು ಬಿದ್ದಿರುವ ವಿದ್ಯುತ್ ಕಂಬಗಳು ಮತ್ತು ವಿದ್ಯುತ್ ತಂತಿಗಳಿಗೆ ಸಂಪರ್ಕ ಕಲ್ಪಿಸುವ ಕಾರ್ಯ ಹಲವು ಗಂಟೆಗಳು ಕಳೆದರೂ ಸಾಧ್ಯವಾಗಿಲ್ಲ.