ಸುದ್ಧಿಕನ್ನಡ ವಾರ್ತೆ
Goa: ಇಲ್ಲಿಯವರೆಗೆ ನಾವು ದೇಶಾದ್ಯಂತ ನಾಮ್ ಫೌಂಡೇಶನ್ ವತಿಯಿಂದ ಹಲವಾರು ಸಾಮಾಜಿಕ ಚಟುವಟಿಕೆಗಳನ್ನು ಕೈಗೊಂಡಿದ್ದೇವೆ, ಮುಂಬರುವ ದಿನಗಳಲ್ಲಿ ನಾಮ್ ಫೌಂಡೇಶನ್ ವತಿಯಿಂದ ಗೋವಾದಲ್ಲಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಇದರಲ್ಲಿ ಮುಖ್ಯವಾಗಿ ಕುಡಿಯುವ ನೀರಿನ ಸಂರಕ್ಷಣೆ, ಕೃಷಿ ಪುನರುಜ್ಜೀವನ, ಪಶುಸಂಗೋಪನೆ, ಸೇರಿದಂತೆ ಹಲವು ಪ್ರಮುಖ ವಿಷಗಳನ್ನು ಒಳಗೊಂಡಿದೆ ಎಂದು ಖ್ಯಾತ ನಟ ಮತ್ತು ನಾಮ್ ಫೌಂಡೇಶನ್ ಸಂಸ್ಥಾಪಕ ನಾನಾ ಪಾಟೇಕರ್ ಹೇಳಿದ್ದಾರೆ.
ಗೋವಾ ವಿಶ್ವವಿದ್ಯಾಲಯದಲ್ಲಿ ಗೋವಾ ಬ್ಯುಸನೆಸ್ ಶಾಖೆಯ ವತಿಯಿಂದ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ನಾನಾ ಪಾಟೇಕರ್ ಮಾತನಾಡುತ್ತಿದ್ದರು.
ಜಮ್ಮು ಕಾಶ್ಮೀರದಲ್ಲಿ ಸೈನಿಕರು ಅಲ್ಲಿನ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲು ಉತ್ತಮ ಶಾಲೆಗಳನ್ನು ಪ್ರಾರಂಭಿಸುವ ಕಾರ್ಯ ಕೈಗೊಂಡಿದ್ದಾರೆ. ಈ ಕಾರ್ಯದಲ್ಲಿ ಬೆಂಬಲ ನೀಡಲು ನಾಮ್ ಫೌಂಡೇಶನ್ ನಿರ್ಧರಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಲೆಗಳು ಹೀನಾಯ ಸ್ಥೀತಿಗೆ ತಲುಪಿದ್ದವು. ಟಾಟಾ ಫೌಂಡೇಶನ್, ನಾಮ್ ಮತ್ತು ಸೈನಿಕ್ ಮೂಲಕ ಶಾಲೆಗಳನ್ನು ಪ್ರಾರಂಭಿಸಲಾಯಿತು. ಅಂತೆಯೇ ಛತ್ತೀಸಗಢ. ಓರಿಸ್ಸಾದಲ್ಲಿ ನಾಮ್ ಫೌಂಡೇಶನ್ ಕೆಲಸ ಮಾಡುತ್ತಿದೆ. ಎಲ್ಲ ಧರ್ಮ ಜಾತಿ ಸಮುದಾಯದ ಜನರು ಮುಖ್ಯ ವಾಹಿನಿಗೆ ಬರಬೇಕು ಎಂಬುದು ನಮ್ಮ ಮುಖ್ಯ ಉದ್ದೇಶ, ಆಗ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ ಎಂದು ನಾನಾ ಪಾಟೇಕರ್ ಅಭಿಪ್ರಾಯಪಟ್ಟರು.
ನಾವೆಲ್ಲರೂ ಎಷ್ಟೇ ಬೆಳೆದರೂ ಸಾಮಾನ್ಯ ಜೀವನ ಮತ್ತು ಜೀವನ ಮಟ್ಟವನ್ನು ಅಳವಡಿಸಿಕೊಳ್ಳಬೇಕು. ಸಾಮಾನ್ಯರಾಗಿರುವುದು ನಮ್ಮ ಶಕ್ತಿ ಎಂದು ನಾನು ನನ್ನ ಅನುಭವದಿಂದ ಕಲಿತಿದ್ದೇನೆ. ನಾನು ನನ್ನನ್ನು ಒಬ್ಬ ಸ್ಟಾರ್ ಎಂದು ಪರಿಗಣಿಸುವುದಿಲ್ಲ. ಸಾಮಾನ್ಯವಾಗಿರುವ ನಾನು ಸರ್ಕಾರದ ಜೊತೆ ಜಗಳವಾಡುತ್ತಲೇ ಇರುತ್ತೇನೆ. ಸಿಗದಿದ್ದನ್ನು ಕೇಳುತ್ತೇನೆ, ಏಕೆಂದರೆ ಸರ್ಕಾರವು ನಮ್ಮಿಂದಾಗಿದೆ ಎಂದು ನಾನಾ ಪಾಟೇಕರ್ ನುಡಿದರು.