ಸುದ್ಧಿಕನ್ನಡ ವಾರ್ತೆ
ಪಣಜಿ: ಡಾ.ಅಂಬೇಡ್ಕರ್ ವಾಣಿಜ್ಯ ಮಹಾಸಭೆ (DACC) ಯ ನಿಯೋಗವು ಮಂಗಳವಾರ ಗೋವಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗದ ಅಧ್ಯಕ್ಷ ದೀಪಕ್ ಕರ್ಮಲ್ಕರ್ ಅವರನ್ನು ಶ್ರಮ ಶಕ್ತಿ ಭವನ, ಪಣಜಿ, ಗೋವಾ ಅವರ ಕಚೇರಿಯಲ್ಲಿ ಭೇಟಿಯಾಗಿ ಚರ್ಚೆ ನಡೆಸಲಾಯಿತು.
ನಿಯೋಗದ ನೇತೃತ್ವವನ್ನು ಮಾಜಿ ಶಾಸಕರಾದ, ಡಾ. ಅಂಬೇಡ್ಕರ್ ವಾಣಿಜ್ಯ ಮಹಾಸಭೆಯ ಮಹಾನಿರ್ದೇಶಕರಾದ ಸರ್ದಾರ್ ಇಂದರ್ ಇಕ್ಬಾಲ್ ಸಿಂಗ್ ಅಟ್ವಾಲ್, ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಸಿದ್ದಣ್ಣ ಮೇಟಿ, ಗೋವಾ ಬಿಜೆಪಿ ಕರ್ನಾಟಕ ಸೆಲ್ ದಕ್ಷಿಣ ಗೋವಾ ಜಿಲ್ಲಾ ಕಾರ್ಯದರ್ಶಿ ರಾಜೇಶ್ ಶೆಟ್ಟಿ, ಸಾಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಅಜಿತ್ ಪಂಚವಡ್ಕರ್, ಎಸ್.ಟಿ. ನಿಗಮದ ಅಧ್ಯಕ್ಷ ವಾಸುದೇವ್ ಗಾಂವಕರ್, ಆಲ್ ಗೋವಾ ಬಂಜಾರ ಸಮಾಜದ ಕಾರ್ಯದರ್ಶಿ ತೌರಪ್ಪ ಜಾಧವ್ ಸೇರಿದ್ದರು.
ಈ ಸಂದರ್ಭದಲ್ಲಿ ಪ್ರಮುಖವಾಗಿ- ಗೋವಾ ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗವನ್ನು ರಾಷ್ಟ್ರೀಯ ಆಯೋಗದೊಂದಿಗೆ ಸಮಾನಗತಿ ಸಾಧಿಸುವ ಮೂಲಕ ಗೋವಾದ ಪ್ರವಾಸಿ ಸಮುದಾಯದ ಏಳ್ಗೆಗಾಗಿ ಕ್ರಮಗಳನ್ನು ತೆಗೆದುಕೊಳ್ಳುವುದು. ಡಾ. ಅಂಬೇಡ್ಕರ್ ವಾಣಿಜ್ಯ ಮಹಾಸಭೆಯ ಗೋವಾ ರಾಜ್ಯ ಘಟಕದ ಪ್ರಾರಂಭೋತ್ಸವ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರ ಹಿಂದುಳಿದ ವರ್ಗಗಳು ಹಾಗೂ ರಾಜ್ಯದ ಇತರ ದುರ್ಬಲ ವರ್ಗಗಳ ಆರ್ಥಿಕ ಸಬಲೀಕರಣಕ್ಕಾಗಿ DACC ಮತ್ತು ಗೋವಾ ಸರ್ಕಾರದ ಸಹಯೋಗ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಯಿತು.