ಸುದ್ಧಿಕನ್ನಡ ವಾರ್ತೆ
Goa: ಕರ್ನಾಟಕ ರಾಜ್ಯವು ಮಹದಾಯಿ ನದಿ ನೀರನ್ನು ತಿರುಗಿಸಿಕೊಳ್ಳಲು ನೆರಸೆ ಎಂಬಲ್ಲಿ ಯಾವುದೇ ಕಾಮಗಾರಿಯನ್ನು ಕೈಗೆತ್ತಿಕೊಂಡಿಲ್ಲ ಎಂಬುದು ಗೋವಾ ರಾಜ್ಯ ಜಲಸಂಪನ್ಮೂಲ ಇಲಾಖೆ ನಡೆಸಿರುವ ಭೇಟಿಯಿಂದ ತಿಳಿದುಬಂದಿದೆ. ಈ ಕುರಿತಂತೆ ತಪ್ಪು ಮಾಹಿತಿಯನ್ನು ಹರಡಿಸಲಾಗುತ್ತಿದೆ ಎಂದು ಗೋವಾ ರಾಜ್ಯ ಜಲಸಂಪನ್ಮೂಲ ಇಲಾಖೆಯ ಮುಖ್ಯ ಎಂಜಿನೀಯರ್ ಪ್ರಮೋದ ಬಾದಾಮಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಮಹದಾಯಿ ಪ್ರವಾಹ ಸಮೀತಿಯ ಬೈಠಕ್ ನಲ್ಲಿ ಈ ವಿಷಯ ಚರ್ಚೆಯಾಗಿಲ್ಲ. ಕರ್ನಾಟಕವು ಆ ಪರಿಸರದಲ್ಲಿ ಯಾವುದೇ ಕಾಮಗಾರಿಯನ್ನೂ ಕೈಗೆತ್ತಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಹಾರಾಷ್ಟ್ರದಿಂದ ಕರ್ನಾಟಕವು ತಿಳಾರಿ ಅಣೇಕಟ್ಟಿನಿಂದ ನೀರನ್ನು ಪಡೆಯಲಿದೆ ಎಂಬ ಸುದ್ದಿ ಕಳೆದ ಕೆಲ ದಿನಗಳ ಹಿಂದೆ ಹರಡಿತ್ತು. ಇದರಲ್ಲಿ ಯಾವುದೇ ಸತ್ಯವಿಲ್ಲ. ಇದನ್ನು ನಾವು ಆರಂಭದಿಂದಲೂ ಹೇಳುತ್ತಲೇ ಬಂದಿದ್ದೇವೆ. ನಂತರ ಕಣಕುಂಬಿಯಲ್ಲಿ ಕರ್ನಾಟಕವು ಕಾಮಗಾರಿ ಕೈಗೆತ್ತಿಕೊಂಡಿದೆ ಎಂಬ ಚರ್ಚೆಯೂ ನಡೆದಿತ್ತು. ನಂತರ ಮಹದಾಯಿ ಪ್ರವಾಹ ಸಮೀತಿಯು ಕಣಕುಂಬಿಗೆ ಭೇಟಿ ನೀಡಿದಾಗ ಕರ್ನಾಟಕವು ಅಲ್ಲಿ ಯಾವುದೇ ಕಾಮಗಾರಿಯನ್ನು ಕೈಗೆತ್ತಿಕೊಂಡಿಲ್ಲ ಎಂಬುದು ಸ್ಪಷ್ಟವಾಯಿತು. ಇದೀಗ ಅಲ್ಲಿ ಪೈಪ್ ಲೈನ್ ಅಳವಡಿಸಲಾಗುತ್ತಿದೆ ಎಂಬ ಸುದ್ಧಿ ಹರಡಿಸಲಾಗುತ್ತಿದೆ, ಇದಲ್ಲೂ ಯಾವುದೇ ಸತ್ಯವಿಲ್ಲ. ಅಲ್ಲಿ ನಮ್ಮ ತಂಡವನ್ನು ಕಳುಹಿಸಿ ವೀಕ್ಷಣೆ ಮಾಡಿದ್ದೇವೆ ಕರ್ನಾಟಕವು ಕಾವುದೇ ಕಾಮಗಾರಿಯನ್ನು ಕೈಗೆತ್ತಿಕೊಂಡಿಲ್ಲ ಎಂದು ಪ್ರಮೋದ ಬಾದಾಮಿ ಸ್ಪಷ್ಟಪಡಿಸಿದರು.
ಕರ್ನಾಟಕವು ಮಹದಾಯಿ ನೀರನ್ನು ತಿರುಗಿಸಿಕೊಳ್ಳುವ ಪ್ರಯತ್ನವನ್ನು ಮಾಡುವುದಿಲ್ಲ…!
ಸರ್ವೋಚ್ಛ ನ್ಯಾಯಾಲಯವು ಮಹದಾಯಿ ನದಿ ನೀರನ್ನು ತಿರುಗಿಸಿಕೊಳ್ಳಲು ಯಾವುದೇ ಕಾಮಗಾರಿ ಕೈಗೆತ್ತಿಕೊಳ್ಳಬಾರದು ಎಂಬ ನಿರ್ಬಂಧ ಹೇರಿದೆ. ರಾಷ್ಟ್ರೀಯ ವನ್ಯ ಜೀವಿ ಮಂಡಳಿ ಕೂಡ ಕರ್ನಾಟಕದ ಈ ಪ್ರಸ್ತಾವಕ್ಕೆ ಸಮ್ಮತಿ ಸೂಚಿಸಿಲ್ಲ. ಗೋವಾದ ಮುಖ್ಯ ವನ್ಯಜೀವಿ ಸಂರಕ್ಷಕರು ನೀಡಿರುವ ನೋಟಿಸ್ ನಿಂದ ಕರ್ನಾಟಕವು ತೊಂದರೆಗೆ ಸಿಲುಕಿದೆ. ಈ ಪರಿಸ್ಥಿತಿಯಲ್ಲಿ ಕರ್ನಾಟಕವು ಮಹದಾಯಿ ನೀರನ್ನು ತಿರುಗಿಸಿಕೊಳ್ಳುವ ಪ್ರಯತ್ನವನ್ನು ಮಾಡುವುದಿಲ್ಲ. ಕರ್ನಾಟಕಕ್ಕೆ ಮಹದಾಯಿ ವಿಚಾರದಲ್ಲಿ ಮುಂದಿನ ಮಾರ್ಗ ಕಂಡುಬರುತ್ತಿಲ್ಲ ಎಂದು ಪ್ರಮೋದ ಬಾದಾಮಿ ಅಭಿಪ್ರಾಯಪಟ್ಟಿದ್ದಾರೆ.