ಪಣಜಿ: ಗೋವಾ ರಾಜ್ಯದಲ್ಲಿ ಆಗಷ್ಟ ತಿಂಗಳಿನಲ್ಲಿ 39 ಇಂಚು ಮಳೆ ದಾಖಲಾಗಿದ್ದು, ಇದುವರೆಗೆ ರಾಜ್ಯದಲ್ಲಿ 155.27 ಇಂಚು ಮಳೆ ದಾಖಲಾಗಿದೆ. ಇದುವರೆಗೆ ರಾಜ್ಯದಲ್ಲಿ ಹಂಗಾಮಿನ ಮಳೆ ಪ್ರಮಾಣಕ್ಕಿಂತ ಶೇ.45.7ರಷ್ಟು ಹೆಚ್ಚು ಮಳೆಯಾಗಿದೆ.
ಗೋವಾದ ವಾಳಪೈಯಲ್ಲಿ ಮಳೆ ಇನ್ನೂರು ಇಂಚಿನ ಹೊಸ್ತಿಲನ್ನು ತಲುಪಿದೆ ಮತ್ತು ವಾಳಪೈಯಲ್ಲಿ ಇದುವರೆಗೆ 197.85 ಇಂಚು ಮಳೆ ದಾಖಲಾಗಿದೆ. ರಾಜ್ಯದಲ್ಲಿ ಅತಿ ಕಡಿಮೆ ಮಳೆ ದಾಬೋಲಿಂನಲ್ಲಿ 121.47 ಇಂಚು ಮಳೆ ದಾಖಲಾಗಿದೆ.
ಗೋವಾ ರಾಜ್ಯದಲ್ಲಿ ಇದುವರೆಗೆ ದಾಖಲೆ ಮಳೆಯಾಗಿದೆ. ಜೂನ್ನಲ್ಲಿ 38 ಇಂಚುಗಳು, ಜುಲೈನಲ್ಲಿ ದಾಖಲೆಯ 78 ಇಂಚುಗಳು ಮತ್ತು ಆಗಷ್ಟನಲ್ಲಿ 39 ಇಂಚುಗಳು ದಾಖಲಾಗಿವೆ. ಆಗಷ್ಟ ಆರಂಭ ಮತ್ತು ಅಂತ್ಯದಲ್ಲಿ ಭಾರಿ ಮಳೆ ದಾಖಲಾಗಿದೆ. ಕಳೆದ ಇಪ್ಪತ್ನಾಲ್ಕು ಗಂಟೆಗಳಲ್ಲಿ ರಾಜ್ಯದಲ್ಲಿ 0.78 ಇಂಚು ಮಳೆ ದಾಖಲಾಗಿದೆ.
ರಾಜ್ಯದ ಎರಡೂ ಜಿಲ್ಲೆಗಳಲ್ಲಿ ಹೆಚ್ಚು ಮಳೆ ದಾಖಲಾಗಿದೆ. ಕೆಪೆಯಲ್ಲಿ ಅತಿ ಹೆಚ್ಚು ಅಂದರೆ 1.96 ಇಂಚು ಮಳೆ ದಾಖಲಾಗಿದೆ. ಮುಗಾರ್ಂವ್ 1.05 ಇಂಚು, ಸಾಂಗೆ 0.98 ಇಂಚು, ಓಲ್ಡ ಗೋವಾ 0.96 ಇಂಚು, ಪೆಡ್ನೆ 0.92 ಇಂಚು, ದಾಬ್ಡೋಂ 0.88 ಇಂಚು ಮಳೆ ದಾಖಲಾಗಿದೆ. ಹವಾಮಾನ ಇಲಾಖೆಯು ಸೆಪ್ಟೆಂಬರ್ 2 ರಿಂದ ಮಳೆಯಾಗುವ ಸಾಧ್ಯತೆಯನ್ನು ವ್ಯಕ್ತಪಡಿಸಿದ್ದು, ಯಲ್ಲೊ ಅಲರ್ಟ್ ಘೋಷಿಸಿದೆ.
ರಾಜ್ಯದ ಹದಿಮೂರು ವಿಭಾಗಗಳ ಪೈಕಿ ಏಳು ವಿಭಾಗಗಳು 150 ಇಂಚಿನ ಮಳೆಯ ಗಡಿ ದಾಟಿವೆ. ಈ ವಿಭಾಗಗಳಲ್ಲಿ ವಾಲ್ಪೈ, ಪೆಡ್ನೆ, ಫೋಂಡಾ, ಓಲ್ಡ್ ಗೋವಾ, ಸಾಖಳಿ, ಕೆಪೆ ಮತ್ತು ಸಾಂಗೆ ಇದರಲ್ಲಿ ಸೇರಿವೆ. ಈ ವರ್ಷ ಜುಲೈ ತಿಂಗಳಲ್ಲಿ ಸುರಿದ ಭಾರಿ ಮಳೆಯಿಂದ ಕೃಷಿ ಹಾಗೂ ತೋಟಗಾರಿಕೆಗೆ ಅಪಾರ ಹಾನಿಯಾಗಿದೆ. ಇದರೊಂದಿಗೆ ಮರಗಳು ಉರುಳಿ ಬಿದ್ದ ಪರಿಣಾಮ ಮನೆ, ವಿದ್ಯುತ್ ಸಾಮಗ್ರಿಗಳಿಗೆ ಅಪಾರ ನಷ್ಟವಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಇದುವರೆಗೆ ದಾಖಲಾಗಿರುವ ಮಳೆ – ಮ್ಹಪ್ಸಾ – 142.59 ಇಂಚು, ಪೆಡ್ನೆ – 159.05 ಇಂಚು, ಫೋಂಡಾ – 150.16 ಇಂಚು, ಪಣಜಿ – 145.09 ಇಂಚು, ಹಳೆ ಗೋವಾ – 152.94 ಇಂಚು, ಸಾಖಳಿ – 168.04 ಇಂಚು, 49 ವಾಳಪೈ 168.04 ಇಂಚು, ದಾಬೋಲಿ – 121.47 ಇಂಚು, ಮಾಗಾರ್ಂವ್ – 144.79 ಇಂಚುಗಳು, ಮುಗಾರ್ಂವ್ – 136.14 ಇಂಚುಗಳು, ಕೆಪೆ – 169.07 ಇಂಚುಗಳು, ಸಾಂಗೆ- 188.68 ಇಂಚು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.