ಸುದ್ಧಿಕನ್ನಡ ವಾರ್ತೆ
ಗೋವಾ ಬೆಳಗಾವಿ ಸಂಪರ್ಕಿಸುವ ಚೋರ್ಲಾ ಮತ್ತು ಅನಮೋಡ ಘಾಟ್ ಒಂದಿಲ್ಲೊಂದು ರೀತಿಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗುವಂತಾಗುತ್ತಿದೆ. ಅನಮೋಡ ಘಾಟ್ ರಸ್ತೆಯಲ್ಲಿ ಭಾರಿ ಭೂಕುಸಿತವುಂಟಾಗಿ ಭಾರಿ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ಇದೀಗ ಚೋರ್ಲಾ ಘಾಟ್ ರಸ್ತೆಯಲ್ಲಿ ಕುಸ್ಮಾಲಿ ಬಳಿ ರಸ್ತೆ ಕೆಸರುಮಯವಾಗಿ ವಾಹನಗಳು ಸಿಲುಕಿಕೊಳ್ಳುತ್ತಿದೆ. ಇಂರತಹದ್ದೇ ಘಟನೆ ಶುಕ್ರವಾರ ನಡೆದಿದ್ದು ಕೆಲ ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಳ್ಳುವಂತಾಗಿದೆ.
ಶುಕ್ರವಾರ ಬೆಳಗಿನ ಜಾವ ಬೆಳಗಾವಿ-ಜಂಬೋಟಿ-ಚೋರ್ಲಾ-ಗೋವಾ ರಸ್ತೆಯ ಕುಸ್ಮಾಲಿ ಸೇತುವೆಯ ಬಳಿ ಕೆಸರುಮಯ ರಸ್ತೆಯಲ್ಲಿ ಟ್ರಕ್ ಸಿಲುಕಿಕೊಂಡಿದ್ದರಿಂದ ವಾಹನ ಸಂಚಾರ ಹಲವು ಗಂಟೆಗಳ ಕಾಲ ಸಂಪೂರ್ಣ ಸ್ಥಗಿತಗೊಂಡ ಘಟನೆ ನಡೆದಿದೆ.
ಬೆಳಗಾವಿ ಚೋರ್ಲಾ ರಸ್ತೆಯಲ್ಲಿ ಶುಕ್ರವಾರ ಬೆಗಿನಜಾವ ಟ್ರಕ್ ಸಿಲುಕಿಕೊಂಡಿದ್ದರಿಂದ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತು. ಎರಡೂ ಬದಿಗಳಲ್ಲಿ ವಾಹನಗಳ ದೀರ್ಘ ಸರತಿ ಸಾಲುಗಳು ರೂಪುಗೊಂಡಿದ್ದರಿಂದ ಪ್ರಯಾಣಿಕರು ಗಂಟೆಗಟ್ಟಲೆ ಕಾಯಬೇಕಾಯಿತು. ನಂತರ ಕಾರ್ಯಾಚರಣೆ ನಡೆಸಿ ಟ್ರಕ್ ಮೇಲೆತ್ತಿದ ನಂತರ ವಾಹನ ಸಂಚಾರ ಸುಗಮಗೊಂಡಿತು.
ಬೆಳಗಾವಿ-ಗೋವಾ ಚೋರ್ಲಾ ಈ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಈಗಾಗಲೇ ನಿಷೇಧವಿದೆ, ಆದರೆ ಆಡಳಿತದ ನಿರ್ಲಕ್ಷ್ಯ ಮತ್ತು ಪೆÇಲೀಸರ ನಿಷ್ಕ್ರಿಯತೆಯಿಂದಾಗಿ ಆ ನಿಯಮಗಳನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ನಾಗರಿಕರು ಟೀಕಿಸುತ್ತಿದ್ದಾರೆ. ಕುಸ್ಮಾಲಿ ಸೇತುವೆಯ ನಿರ್ಮಾಣ ಇನ್ನೂ ಅಪೂರ್ಣವಾಗಿದೆ ಮತ್ತು ಇಂತಹ ಘಟನೆಗಳು ಸೇತುವೆಯ ಸುರಕ್ಷತೆಯ ಬಗ್ಗೆಯೂ ಪ್ರಶ್ನೆಗಳನ್ನು ಹುಟ್ಟುಹಾಕಿವೆ.
ಈ ಘಟನೆಯ ನಂತರ, ಕೋಪಗೊಂಡ ನಾಗರಿಕರು ಆಡಳಿತದ ದುರುಪಯೋಗದ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಭವಿಷ್ಯದಲ್ಲಿ ಇದೇ ರೀತಿಯ ಗಂಭೀರ ಅಪಘಾತ ಸಂಭವಿಸಿದಲ್ಲಿ, ಅದಕ್ಕೆ ಸರ್ಕಾರವೇ ಹೊಣೆ ಎಂದು ಆರೋಪಿಸಿದರು.