ಪಣಜಿ: ಭಾರತೀಯ ಮಾಜಿ ಕ್ರಿಕೇಟ್ ಆಟಗಾರ ಪ್ರಗ್ಯಾನ್ ಓಜಾ ರವರು ಗೋವಾ ರಾಜ್ಯಪಾಲ ಪಿ.ಎಸ.ಶ್ರೀಧರನ್ ಪಿಳ್ಳೆ ರವರನ್ನು ಭೇಟಿಯಾದರು. ತಮ್ಮ ಕುಟುಂಬ ಸಮೇತರಾಗಿ ಗೋವಾ ಪ್ರವಾಸಕ್ಕೆ ಆಗಮಿಸಿದ್ದ ಅವರು ರಾಜ್ಯಪಾಲರನ್ನು ಭೇಟಿಯಾದರು. ಗೋವಾ ರಾಜ್ಯಪಾಲರು ಹಾಗೂ ಕ್ರಿಕೇಟ್ ಆಟಗಾರ ಓಜಾ ರವರ ಭೇಟಿಯ ಈ ಪೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಗ್ಯಾನ್ ಓಜಾ ರವರು ತಮ್ ಇನ್‍ಸ್ಟಾಗ್ರಾಂನಲ್ಲಿ ಗೋವಾ ರಾಜ್ಯಪಾಲರೊಂದಿಗಿನ ಪೋಟೊವನ್ನು ಹಂಚಿಕೊಂಡಿದ್ದಾರೆ. ಗೋವಾ ರಾಜ್ಯಪಾಲರ ಭೇಟಿಯ ಅನುಭವ ತುಂಬಾ ಆನಂದಮಯವಾಗಿತ್ತು, ರಾಜ್ಯಪಾಲರು ನೀಡಿರುವ ಅತ್ಯಮೂಲ್ಯ ಸಮಯಕ್ಕಾಗಿ ನಾನು ಅವರಿಗೆ ಆಭಾರಿಯಾಗಿದ್ದೇನೆ ಎಂದು ಓಜಾ ರವರು ಹೇಳಿದ್ದಾರೆ.
ಗೋವಾ ರಾಜ್ಯಪಾಲ ಶ್ರೀಧರನ್ ಪಿಳ್ಳೆ ರವರು ಕೂಡ ಈ ಪೋಟೊವನ್ನು ಹಂಚಿಕೊಂಡಿದ್ದಾರೆ.