ಸುದ್ಧಿಕನ್ನಡ ವಾರ್ತೆ
ಯಲ್ಲಾಪುರ :ಕೆಲಸಕ್ಕೆ ಹೋದ ತನ್ನ ಗಂಡನನ್ನು  ಅವನ ಜೊತೆಗಿದ್ದವನು ಕೊಲೆ ಮಾಡಿರುವುದಾಗಿ ಪತ್ನಿ  ಯಲ್ಲಾಪುರ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಮದನೂರಿನ ತಾವರಗಟ್ಟಾದ ಪಾವ್ಲು ಪ್ರಾನ್ಸಿಸ್ ಸಿದ್ದಿ ಎಂಬಾತ ಬಸಳೇಬೈಲಿನ ಸರೇಶ ಲಕ್ಷ್ಮಣ ಪವಾರ ಎಂಬಾತನೊಂದಿಗೆ ಕೆಲಸಕ್ಕೆ ಹೋದವನು ಎರಡು ಮೂರು ದಿನವಾದರೂ ಪತ್ತೆಯಾಗದೇ ಪ್ರಾನ್ಸಿಸ್ನ ಪತ್ನಿ  ಮಂಗಲಾ ಸಿದ್ದಿ ಸುರೇಶನ ಬಳಿ ವಿಚಾರಿಸಿದ್ದರೂ ಆಕೆಯನ್ನು ಹೀನಾಯವಾಗಿ ಬೈದಿದ್ದನೆನ್ನಲಾಗಿದ್ದು ಸೆ.೩೦ ರಂದು ಪಾವ್ಲು ಸಿದ್ದಿ ಈತನ ಶವ ಮದನೂರಿನ ಯಳ್ಳಂಬಿ ಹಳ್ಳದಲ್ಲಿ ದೊರೆತಿದೆ.ಸುರೇಶ ಮರಾಠಿಯೇ ಈತನ ಕೊಲೆ ಮಾಡಿ ಬೀಸಾಕಿರುವುದು ಎಂದು ಈಕೆ ದೂರು ನೀಡಿದ್ದಾಳೆ.
ಈತನ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಮಂಗಲಾ ಪಾವ್ಲು ಸಿದ್ದಿ ಆಗ್ರಹಿಸಿದ್ದಾಳೆ.ಪೋಲಿಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.ಸುರೇಶ ಮರಾಠಿ ಕಾಡಿನೊಳಗೆ  ಈತನನ್ನು ಕರೆದುಕೊಂಡು‌ಕೆಲಸಕ್ಕೆ ಹೋದಾಗ ಅವಘಡವೊಂದು ಸಂಭವಿಸಿ ಪಾವ್ಲು ಸಿದ್ದಿ ಸಾವನ್ನಪ್ಪುತ್ತಾನೆ.ನಂತರ ಅವನ ಹೆಣವನ್ನು ಬೇರೆಡೆ ಅಂದರ ಹಳ್ಳದ ಬದಿ ಎಸೆದು ಬರುತ್ತಾನೆ.ಹೀಗೆ ಈ ಘಟನೆಯಿಂದ ಹೊರಬರಭೇಕೆಮನದು ಬಯಸುತ್ತಾನೆ.ಆದರೆ ಕೊನೆಯಲ್ಲೇ ಸ್ವತಃ ಸುರೇಶ ಮರಾಠಿಯೇ ಸತ್ಯವನ್ನು ತಾನೇ ಬಾಯ್ಬಿಟ್ಟು ಹೇಳುತ್ತಾನೆ ಇದು ಘಟನೆಯ ಸಾರವಾಗಿದೆ.