ಸುದ್ದಿ ಕನ್ನಡ ವಾರ್ತೆ

ಉಡುಪಿ :ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕರಣದ ಆರೋಪಿ, ಕಳೆದ 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಹಾಸನ ಜಿಲ್ಲೆಯ ಬಿಡಗನಹಳ್ಳಿಯ ಮಧು ಅಲಿಯಾಸ್ ಉಮೇಶ್ ಎಂಬಾತನನ್ನು ಗುರುವಾರ ಚೆನ್ನರಾಯಪಟ್ಟಣದಲ್ಲಿ ಮಲ್ಪೆ ಪೊಲೀಸರು ಬಂಧಿಸಿದ್ದಾರೆ.
ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು,ಜೂ. 29ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಹಿರಿಯಡ್ಕದ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿದೆ.

ಸಿಬ್ಬಂದಿಗಳಾದ ಎಚ್.ಸಿ. ವಿಶ್ವನಾಥ್ ಎಚ್., ಪಿಸಿ ಮಹಮದ್ ರಫಿ, ದಿನೇಶ್ ಮತ್ತು ರವಿ ಜಾದವ್ ಸಹಕರಿಸಿದ್ದರು.

ಆರೋಪಿ ವಿರುದ್ಧ ಮಲ್ಪೆ ಮತ್ತು ಕಾಪು ಪೊಲೀಸ್ ಠಾಣೆಯಲ್ಲಿ ದೇವಸ್ಥಾನ ಕಳವು, ಬೆಂಗಳೂರು ನಗರದಲ್ಲಿ ಹಲ್ಲೆ ಪ್ರಕರಣ 2 ದಾಖಲಾಗಿದೆ.