ಸುದ್ಧಿಕನ್ನಡ ವಾರ್ತೆ
Goa ವಾಸ್ಕೊ: ಗೋವಾದ ವಾಸ್ಕೊದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ರೆನಾಲ್ಟ ಕ್ವಿಡ್ ಕಾರನ್ನು (ಜಿಎ-07, ಕೆ-9832) ಸಪ್ಟೆಂಬರ್ 17 ರಂದು ರಾತ್ರಿ ವೇಳೆ ವ್ಯಕ್ತಿಯೋರ್ವ ಕಳ್ಳತನ ಮಾಡಿದ್ದು, ಪೋಲಿಸರು ಈತನ ಸಂಭಾವ್ಯ ಪೋಟೊ (ರೇಖಾಚಿತ್ರ) ಬಿಡುಗಡೆ ಮಾಡಿದ್ದಾರೆ. ಈ ವ್ಯಕ್ತಿ ಎಲ್ಲಿಯಾದರೂ ಕಂಡುಬಂದಲ್ಲಿ ಕೂಡಲೆ ಪೋಲಿಸ್ ಠಾಣೆಗೆ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ಪೋಲಿಸರು ತಿಳಿಸಿದ್ದಾರೆ.
ಕಾರು ಕಳುವು ಮಾಡಿರುವ ವ್ಯಕ್ತಿಯು ಸಾಧಾರಣ ಕಪ್ಪು ಬಣ್ಣ, ಸುಮಾರು 5.5 ಅಡಿ ಎತ್ತರ ಇದ್ದಾನೆ. ಈ ವ್ಯಕ್ತಿಯ ಬಳಿ ಐಪೋನ್ ಕೂಡ ಇದ್ದು, ಈತ ಕಾರನ್ನು ಕದ್ದು ಕರ್ನಾಟಕಕ್ಕೆ ಹೋಗಿ ತಲೆ ಮರೆಸಿಕೊಂಡಿರುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗುತ್ತಿದೆ. ಪೋಲಿಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು ಈತನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಈ ಆರೋಪಿಯು ಇನ್ನೂ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಸಾಧ್ಯತೆಯಿದ್ದು, ಇನ್ನಷ್ಟು ಅಪರಾಧ ವೆಸಗುವ ಮುನ್ನ ಈತನ ಪತ್ತೆಗೆ ಪೋಲಿಸರು ಹುಡುಕಾಟ ನಡೆಸಿದ್ದಾರೆ. ಈತನ ಸಂಭಾವ್ಯ ಚಿತ್ರವನ್ನು ಕೂಡ ಪೋಲಿಸರು ಬಿಡುಗಡೆಗೊಳಿಸಿದ್ದಾರೆ. ಈ ಕಾರು ಕಂಡುಬಂದಲ್ಲಿ ಅಥವಾ ಈ ಪೋಟೊದಲ್ಲಿರುವ ವ್ಯಕ್ತಿ ಕಂಡುಬಂದಲ್ಲಿ ಕೂಡಲೇ ದೂ-9370162888 ಈ ಸಂಖ್ಯೆಗೆ ಕೂಡಲೇ ಕರೆ ಮಾಡುವಂತೆ ಕೋರಲಾಗಿದೆ.