ಸುದ್ಧಿಕನ್ನಡ ವಾರ್ತೆ

Goa: ಗೋವಾದ ಪರ್ವರಿ ಪೋಲಿಸರು ಕಾರ್ಯಾಚರಣೆ ನಡೆಸಿ 7000 ರೂ ಗಳ ಇಲೆಕ್ಟ್ರಿಕ್ ಮೀಟರ್ ಕಳ್ಳತನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಬೆಳಗಾವಿಯ ನರೇಂದ್ರ ಗಾವಡೆ ಎಂಬ ಆರೋಪಿಯನ್ನು ಬಂಧಿಸಿದ್ದಾರೆ.

ಬೆಳಗಾವಿ ಮೂಲದ 25 ವರ್ಷದ ಈ ಯುವಕ ಪರ್ವರಿಯ ಇಲೆಕ್ಟ್ರಿಸಿಟಿ ಡಿಪಾರ್ಟಮೆಂಟ್ ನ ಸಬ್ ಡಿವಿಜನ್ ನಲ್ಲಿ ಕಳ್ಳತನ ಎಸಗಿದ್ದ ಎನ್ನಲಾಗಿದೆ. ಈತ ಕೇವಲ ಇಲೆಕ್ಟ್ರಿಕ್ ಮೀಟರ್ ಮಾತ್ರವಲ್ಲದೆಯೇ ಇತರ ಕಳ್ಳತನದಲ್ಲಿಯೂ ಭಾಗಿಯಾಗಿದ್ದ ಎನ್ನಲಾಗಿದೆ. ಬಂಧಿತ ಆರೋಪಿಯಿಂದ ಪೋಲಿಸರು ಇಒಂದು ದ್ವಿಚಕ್ರವಾಹನವನ್ನೂ ವಷಪಡಿಸಿಕೊಂಡಿದ್ದಾರೆ, ಈ ವಾಹನ ಕೂಡ ಕಳ್ಳತನ ಮಾಡಿದ್ದೇ ಆಗಿರಬಹುದು ಎಂದು ಪೋಲಿಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಗೋವಾ ಪರ್ವರಿ ಇಲೆಕ್ಟ್ರಿಸಿಟಿ ವಿಭಾಗದಿಂದ ಪರ್ವರಿ ಪೋಲಿಸ್ ಠಾಣೆಯಲ್ಲಿ ಸಪ್ಟೆಂಬರ್ 23 ರಂದು ದೂರು ದಾಖಲಿಸಲಾಗಿತ್ತು. ಅಪರಿಚಿತ ವ್ಯಕ್ತಿಯೋರ್ವ ಇಲೆಕ್ಟ್ರಿಸಿಟಿ ವಿಭಾಗದಿಂದ ಡಿಜಿಟಲ್ ಮೀಟರ್ ಕಳ್ಳತನವಾಗಿರುವ ಬಗ್ಗೆ ಪೋಲಿಸ್ ದೂರು ನೀಡಲಾಗಿತ್ತು. ಪರ್ವರಿ ಪೋಇಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ಬೆಳಗಾವಿಯÀ ಆರೋಪಿಯನ್ನು ಬಂಧಿಸಿ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ಹೆಚ್ಚಿನ ತನಿಖಾ ಕಾರ್ಯ ಕೈಗೆತ್ತಿಕೊಡಿದ್ದಾರೆ.