ಸುದ್ದಿಕನ್ನಡ ವಾರ್ತೆ
Goa : ಗೋವಾದ ಪರ್ವರಿಯ ಮಹಿಳೆಯೊಬ್ಬರನ್ನು ವಂಚಿಸಿದ ಆರೋಪದ ಮೇಲೆ ಬೆಂಗಳೂರಿನ ವ್ಯಕ್ತಿಯೊಬ್ಬರ ವಿರುದ್ಧ ಪರ್ವರಿಯ ಪೆÇಲೀಸರು 9.68 ಲಕ್ಷ ರೂ.ಗಳ ವಂಚನೆ ಪ್ರಕರಣ ದಾಖಲಿಸಿದ್ದಾರೆ.
ವಿದೇಶದಲ್ಲಿ ಅಧ್ಯಯನ ಮಾಡಲು ಮಗಳಿಗೆ ಕೆನಡಾ ವೀಸಾ ಒದಗಿಸುವುದಾಗಿ ನಂಬಿಸಿ ಪರ್ವರಿಯ ಮಹಿಳೆಯೊಬ್ಬರಿಂದ 9.68 ಲಕ್ಷ ರೂ. ವಂಚಿಸಿದ ಆರೋಪದ ಮೇಲೆ ಬೆಂಗಳೂರಿನ ವ್ಯಕ್ತಿಯೊಬ್ಬರ ವಿರುದ್ಧ ಗೋವಾದ ಪರ್ವರಿಯ ಪೆÇಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಲಭ್ಯವಾಗಿರುವ ಮಾಹಿತಿಯ ಅನುಸಾರ- ಈ ಘಟನೆ ಆಗಸ್ಟ್ ಮತ್ತು ಸೆಪ್ಟೆಂಬರ್ 2024 ರ ನಡುವೆ ನಡೆದಿದ್ದು, ಕ್ಯಾಸಿನೊವೊಂದರಲ್ಲಿ ವ್ಯವಸ್ಥಾಪಕರಾಗಿರುವ ದೂರುದಾರರು ಕ್ಯಾಸಿನೊಗೆ ಭೇಟಿ ನೀಡುತ್ತಿದ್ದ ಆರೋಪಿ ಬಿ ಪಿ ಮಣಿಕಂಠ ಅವರನ್ನು ಭೇಟಿಯಾದರು. ನಂತರ ದೂರುದಾರರು ಮಣಿಕಂಠ ಅವರಿಗೆ ತಮ್ಮ ಮಗಳನ್ನು ಹೆಚ್ಚಿನ ಶಿಕ್ಷಣಕ್ಕಾಗಿ ಕೆನಡಾಕ್ಕೆ ಕಳುಹಿಸಲು ಬಯಸುವುದಾಗಿ ತಿಳಿಸಿದ್ದಾರೆ. ಆ ಸಮಯದಲ್ಲಿ, ಮಣಿಕಂಠ ದೂರುದಾರರಿಗೆ ಆಕೆಯ ಮಗಳ ಶಿಕ್ಷಣಕ್ಕಾಗಿ ವೀಸಾ ಪಡೆದುಕೊಡುವುದಾಗಿ ಭರವಸೆ ನೀಡಿದ್ದರು ಎನ್ನಲಾಗಿದೆ.
ನಂತರ ಮಹಿಳೆಯು ಆರೋಪಿಯು ಒದಗಿಸಿದ ಬ್ಯಾಂಕ್ ಖಾತೆಗಳಿಗೆ 9,68,470 ರೂ.ಗಳನ್ನು ಮೇಲಿನ ಅವಧಿಯಲ್ಲಿ ವರ್ಗಾಯಿಸಿದ್ದಾರೆ. ಮಹಿಳೆಗೆ ವೀಸಾ ಸಿಗದಿದ್ದಾಗ, ಮಣಿಕಂಠ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರು, ಆದರೆ ಅವರು ಕ್ಯಾಸಿನೊಗೆ ಭೇಟಿ ನೀಡುವುದನ್ನು ನಿಲ್ಲಿಸಿದರು ಮತ್ತು ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ತಾನು ಮೋಸ ಹೋಗಿದ್ದೇನೆಂದು ಅರಿತುಕೊಂಡ ಮಹಿಳೆಯು ಪರ್ವರಿ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪರ್ವರಿಯ ಪೆÇಲೀಸರು ಮಣಿಕಂಠ ವಿರುದ್ಧ ಪ್ರಕರಣ ದಾಖಲಿಸಿದ್ದು, ಪೆÇಲೀಸ್ ಇನ್ಸ್ಪೆಕ್ಟರ್ ರಾಹುಲ್ ಪರಬ್ ಅವರ ಮಾರ್ಗದರ್ಶನದಲ್ಲಿ ಪಿಎಸ್ಐ ಸಚಿನ್ ಶಿರೋಡ್ಕರ್ ಅವರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.