ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾ ರಾಜಧಾನಿ ಪಣಜಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಕಾರ್ಮಿಕರೋರ್ವನ ಹತ್ಯೆ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.
ಭಾಟ್ಲೆ-ಪಣಜಿಯ ರಾಮ ಮಂದಿರದ ಬಳಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಡಿಸೆಂಬರ್ 9 ರಂದು ರಾತ್ರಿ 8: 45 ರ ಸುಮಾರಿಗೆ ಜಾನ್ ಎಂಬ 48 ವರ್ಷದ ಕಾರ್ಮಿಕನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ನಡೆದಿದೆ. ಘಟನೆಯ ನಂತರ ಶಂಕಿತ ಅರವಿಂದ್ ತಿವಾರಿ ಸ್ಥಳದಿಂದ ಓಡಿ ಹೋಗಿದ್ದಾನೆ. ಆದರೆ ಸಾಂದರ್ಭಿಕ ಸಾಕ್ಷ್ಯಗಳನ್ನು ಸಂಗ್ರಹಿಸಿದ ಪಣಜಿ ಪೆÇಲೀಸರು ಶಂಕಿತ ಆರೋಪಿ ಅರವಿಂದ್ ತಿವಾರಿಯನ್ನು ಘಟನೆ ನಡೆದು ಕೇವಲ ಎರಡು ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ದೊರೆತ ಮಾಹಿತಿಯ ಪ್ರಕಾರ, ಪಣಜಿ ಭಾಟ್ಲೆಯ ಶ್ರೀ ರಾಮ ಮಂದಿರದ ಬಳಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಸೋಮವಾರ ರಾತ್ರಿ ಅರವಿಂದ್ ತಿವಾರಿ ಮತ್ತು ಜಾನ್ ಆಹಾರದ ವಿಷಯದಲ್ಲಿ ಜಗಳವಾಡಿದ್ದರು. ಈ ವಾದ ಜಗಳ ತಾರಕಕ್ಕೇರಿತ್ತು. ಅರವಿಂದ್ ತಿವಾರಿ ಹರಿತವಾದ ಆಯುಧದಿಂದ ಕತ್ತು ಸೀಳಿ ಜಾನ್‍ನನ್ನು ಹತ್ಯೆ ಮಾಡಿದ್ದಾನೆ. ಗುತ್ತಿಗೆದಾರ ನಜೀರ್ ಮುಲ್ಲಾ ಪೆÇಲೀಸರಿಗೆ ದೂರು ನೀಡಿದ ನಂತರ, ಉತ್ತರ ಗೋವಾ ಪೆÇಲೀಸ್ ವರಿಷ್ಠಾಧಿಕಾರಿ ಅಕ್ಷತ್ ಕೌಶಲ್, ಉಪ ಅಧೀಕ್ಷಕ ಸುದೇಶ್ ನಾಯ್ಕ್, ಇನ್ಸ್‍ಪೆಕ್ಟರ್ ವಿಜಯಕುಮಾರ್ ಚೋಡಣಕರ್, ಸಬ್ ಇನ್ಸ್‍ಪೆಕ್ಟರ್ ದೀಪೇಶ್ ಶೆಟ್ಕರ್, ರೋಹನ್ ನಾಗೇಶ್ಕರ್, ಹೆಡ್ ಕಾನ್‍ಸ್ಟೆಬಲ್ ನಿತಿನ್ ಗಾವ್ಕರ್, ಕಾನ್‍ಸ್ಟೆಬಲ್ ವಿಕಾಸ್ ನಾಯ್ಕ್, ಕಾನ್‍ಸ್ಟೆಬಲ್ ಇರ್ಮಿಯಾ ಗುರಯ್ಯ , ಕಾನ್‍ಸ್ಟೆಬಲ್ ಪ್ರಥಮೇಶ್ ಮಲಿಕ್ ಸ್ಥಳಕ್ಕೆ ಆಗಮಿಸಿದ್ದರು.
ಅಂತಿಮವಾಗಿ, ವಿಧಿವಿಜ್ಞಾನ ತಂಡದ ಸಹಾಯದಿಂದ ಸಾಂದರ್ಭಿಕ ಪುರಾವೆಗಳನ್ನು ಸಂಗ್ರಹಿಸಿದ ನಂತರ, ಪೆÇಲೀಸರು ತನಿಖಾ ಕಾರ್ಯ ಚುರುಕುಗೊಳಿಸಿದರು ಮತ್ತು ಅರವಿಂದ್ ತಿವಾರಿ, (ವಯಸ್ಸು 38, ಉತ್ತರ ಪ್ರದೇಶದ ಲಖನೌ, ಗೋಮತಿ ನಗರ ನಿವಾಸಿ) ಎಂಬಾತನನ್ನು ಬಂಧಿಸಿದರು. ಅರವಿಂದ್ ತಿವಾರಿ ವಿರುದ್ಧ ಭಾರತೀಯ ನ್ಯಾಯಾಂಗ ಸಂಹಿತೆ 2023 ರ ಸೆಕ್ಷನ್ 103 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.