ಸುದ್ಧಿಕನ್ನಡ ವಾರ್ತೆ
Goa: ಕರ್ನಾಟಕದ ಬೆಳಗಾವಿ ಮಾರ್ಗವಾಗಿ ಗೋವಾಕ್ಕೆ 350 ಕೆಜಿ ಗೋಮಾಂಸವನ್ನು ಅಕ್ರಮವಾಗಿ ಸಾಗಿಸಲಾಗುತ್ತಿದ್ದ ವಾಹನವನ್ನು ಕರ್ನಾಟಕ ಗೋವಾ ಗಡಿ ಭಾಗ ಮೋಲೆಂ ನಲ್ಲಿ ತಡೆಹಿಡಿಯಲಾಗಿದೆ. ಓಮಿನಿ ಚಾಲಕ ಲಿಯಾಕಾತ್ ಬೇಪಾರಿ ಮತ್ತು ವಹೀದ್ ಬೇಪಾರಿ ಎಂಬ ಇಬ್ಬರು ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ.

ಕರ್ನಾಟಕ-ಗೋವಾ ಗಡಿ ಭಾಗ ಮೋಲೆಮ್ ಚೆಕ್ ಪೋಸ್ಟನಲ್ಲಿ ಓಮಿನಿಯನ್ನು ತಡೆ ಹಿಡಿದು ತಪಾಸಣೆಗೆ ಒಳಪಡಿಸಿದಾಗ ಗೋಮಾಂಸವನ್ನು ಅಕ್ರಮವಾಗಿ ಗೋವಾಕ್ಕೆ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಪೋಲಿಸರು ಆರೋಪಿಗಳನ್ನು ಬಂಧಿಸಿ ಹೆಚ್ಚಿನ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.