ಸುದ್ಧಿಕನ್ನಡ ವಾರ್ತೆ
Goa: ನಾಲ್ಕು ವರ್ಷದ ತನ್ನ ಮಗನನ್ನೇ ಗೋವಾದ ಹೋಟೆಲ್ ನಲ್ಲಿ ಕೊಲೆಗೈದ ಆರೋಪ ಎದುರಿಸುತ್ತಿರುವ ಆರ್ಟಿಫಿಶಿಯಲ್ ಇಂಟಲಿಜೆನ್ಸ ಕಂಪನಿ ಸಿಇಒ ಸೂಚನಾ ಸೇಠ್ ಇವಳು ಗೋವಾ ಕಾರಾಗೃಹದಲ್ಲಿದ್ದು ತನ್ನ ಮೊಬೈಲ್ ಪೋನ್ ಗಾಗಿ ನ್ಯಾಯಾಲಯದಲ್ಲಿ ಬೇಡಿಕೆಯಿಟ್ಟಿದ್ದಾಳೆ. ಈ ಅರ್ಜಿಯ ವಿಚಾರಣೆ ಅಕ್ಟೋಬರ್ 22 ರಂದು ನಡೆಯಲಿದೆ.(Artificial intelligence company CEO Suchana Seth, who is facing charges of murder in a hotel in Goa, has demanded her mobile phone in court while she is in Goa jail).
ಬೆಂಗಳೂರು ಮೂಲದ ಸೂಚನಾ ಸೇಟ್ ಇವಳು ಗೋವಾಕ್ಕೆ ತನ್ನ ಮಗನೊಂದಿಗೆ ಪ್ರವಾಅಕ್ಕೆಂದು ಬಂದು, ಗೋವಾದಲ್ಲಿ ಮಗನನ್ನು ಕೊಲೆ ಮಾಡಿದ್ದಾಳೆ ಎಂಬ ಆರೋಪವಿದೆ. ನಂತರ ಇವಳು ಬ್ಯಾಗ್ ನಲ್ಲಿ ಮಗನ ಮೃತದೇಹವನ್ನು ತುಂಬಿಕೊಂಡು ಜನವರಿ 6 ರಂದು ಬೆಂಗಳೂರಿಗೆ ಬಾಡಿಗೆ ಕಾರಿನಲ್ಲಿ ಪ್ರಯಾಣ ಬೆಳೆಸುತ್ತಿದ್ದಾಗ ಕರ್ನಾಟಕದ ಚಿತ್ರದುರ್ಗದಲ್ಲಿ ಸೂಚಣಾ ಸೇಟ್ ಳನ್ನು ಬಂಧಿಸಲಲಾಗಿತ್ತು.
ಕಂಪನಿಯಲ್ಲಿನ ಉದ್ಯೋಗಿ ಹಾಗೂ ವ್ಯಾಪಾರಸ್ಥರನ್ನು ಸಂಪರ್ಕಿಸಲು ತನಗೆ ಮೊಬೈಲ್ ಬೇಕು ಎಂದು ಆರೋಪಿ ಸೂಚನಾ ಸೇಠ್ ಬೇಡಿಕೆಯಿಟ್ಟಿದ್ದಾಳೆ. ಈ ಕುರಿತು ಮುಂಬಯಿ ಉಚ್ಛ ನ್ಯಾಯಾಲಯದ ಗೋವಾ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದಾಳೆ. ಈ ಅರ್ಜಿಯ ವಿಚಾರಣೆ ಅಕ್ಟೋಬರ್ 22 ರಂದು ನಡೆಯಲಿದೆ.