ಸುದ್ಧಿಕನ್ನಡ ವಾರ್ತೆ
Goa: ಬೀಚ್ ಗೆ ಬಂದ ಪ್ರವಾಸಿಗರನ್ನು ಹುಡುಗಿಯರು,ಡ್ರಗ್ಸ,ಮಸಾಜ್ ಹೀಗೆ ಕಾನೂನು ಬಾಹಿರ ವಸ್ತುಗಳ ಮೂಲಕ ಆಮಿಷವೊಡ್ಡಿ ಪ್ರವಾಸಿಗರಿಗೆ ಮೋಸ ಮಾಡುತ್ತಿದ್ದ 29 ಜನ ದಲಾಲಿಗಳನ್ನು ಕಲಂಗುಟ್ ಪೋಲಿಸರು ಬಂಧಿಸಿದ್ದಾರೆ.(Calangute police have arrested 29 brokers who were cheating the tourists by luring the tourists to the beach with illegal things like girls, drugs, massage etc).
ಕಳೆದ 10 ದಿನಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 29 ದಲಾಲಿಗಳನ್ನು ಬಂಧಿಸಿ ಪೋಲಿಸರು ಬಂಧಿತರಿಂದ ತಲಾ 5000 ರೂ ದಂಡ ವಸೂಲಿ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಉತ್ತರ ಗೋವಾ ಪೋಲಿಸ್ ವರಿಷ್ಠಾಧಿಕಾರಿ ಅಕ್ಷಯ ಕೌಶಲ್ ಮಾತನಾಡಿ- ಗೋವಾ ರಾಜ್ಯಕ್ಕೆ ಬರುವ ಪ್ರವಾಸಿಗರು ಗೋವಾದ ಆತಿಥ್ಯವನ್ನು ಸರಿಯಾದ ರೀತಿಯಲ್ಲಿ ಆನಂದಿಸಬೇಕು ಮತ್ತು ರಾಜ್ಯದಲ್ಲಿ ಕಾನೂನು ಸುವ್ಯಸ್ಥೆ ಕಾಪಾಡುವುದು ಈ ಕಾರ್ಯಾಚರಣೆಯ ಮುಖ್ಯ ಉದ್ದೇಶವಾಗಿದೆ ಎಂದರು.