ಸುದ್ದಿಕನ್ನಡ ವಾರ್ತೆ
Goa: ಗೋವಾ ವೈದ್ಯಕೀಯ ಆಸ್ಪತ್ರೆ ಬಾಂಬೋಲಿಂನಲ್ಲಿ ಮೊಬೈಲ್ ಪೋನ್ ಕಳ್ಳತನ ಮಾಡುತ್ತಿದ್ದ ವ್ಯಕ್ತಿ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದ. ಇದೀಗ ಅಗಾಸಿಮ್ ಪೋಲಿಸರು ಕಾರ್ಯಾಚರಣೆ ನಡೆಸಿ ಈ ಮೊಬೈಲ್ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದಿದ್ದವರ ಮೊಬೈಲ್ ಕಳ್ಳತನ ಮಾಡುತ್ತಿದ್ದ ಈತ ಕೊನೆಗೂ ಸೆರೆಯಾಗಿದ್ದಾನೆ.

ಅಗಾಸಿಮ್ ಪೋಲಿಸರು ನೀಡಿದ ಮಾಹಿತಿಯ ಅನುಸಾರ- ಗೋವಾ ಮೆಡಿಕಲ್ ಕಾಲೇಜು ಬಾಂಬೋಲಿಂನಲ್ಲಿ ಮೊಬೈಲ್ ಕಳ್ಳತನ ಮಾಡಿರುವ ಆರೋಪದ ಮೇಲೆ ಪೋಲಿಸರು ಮೊವಿನ್ ಫರ್ನಾಂಡೀಸ್ (ಚಿಂಚಿನಿಮ್) ಎಂಬ ಆರೋಪಿಯನ್ನು ಬಂಧಿಸಿದ್ದಾರೆ.(Police have arrested Movin Fernandez (Chinchinim) for allegedly stealing a mobile phone from Goa Medical College, Bambolim).

ಬಂಧಿತ ಆರೋಪಿಯು ತನ್ನ ಸಹಚರರೊಂದಿಗೆ ಆಸ್ಪತೆಗೆ ಬಂದಿದ್ದ ರೋಗಿಗಳ ಮೊಬೈಲ್ ಕಳ್ಳತನ ಮಾಡಿ ವಿವಿದೆಡೆ ಕಾರ್ಮಿಕರಿಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಡ್ರಗ್ಸ ಖರೀದಿಗೆ ಹಣ ಹೊಂದಿಸಲು ಈತ ಕಳ್ಳತನ ಮಾಡುತ್ತಿದ್ದ ಎಂಬ ಅಂಶವು ಪ್ರಾಥಮಿಕ ತನಿಖೆಯಿಂದ ಪೋಲಿಸರಿಗೆ ತಿಳಿದು ಬಂದಿದ್ದು, ಪ್ರಕರಣ ದಾಖಲಿಸಿರುವ ಪೋಲಿಸರು ಹೆಚ್ಚಿನ ತನಿಖಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ.