ಸುದ್ಧಿಕನ್ನಡ ವಾರ್ತೆ
Goa: ಗೋವಾ ರಾಜಧಾನಿ ಪಣಜಿ ಸಮೀಪದ ರಾಯಬಂದರ್ ಪಾಟೊದ ಮಹದಾಯಿ (ಮಾಂಡವಿ) ನದಿಯಲ್ಲಿ ಪುರುಷನ ಶವವೊಂದು ತೇಲುತ್ತಿರುವ ರೀತಿಯಲ್ಲಿ ಪತ್ತೆಯಾಗಿದೆ. (A dead body of a man was found floating in the Mahadai (Mandavi) river of Raibandar Pato near Goa capital Panaji).
ಗೋವಾ ಪೋಲಿಸ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂಧಿಗಳು ಬೋಟ್ ಮೂಲಕ ಶವವನ್ನು ದಡಕ್ಕೆ ತರಲು ಕಾರ್ಯಾಚರಣೆ ನಡೆಸಿದರು. ಶವದ ಗುರುತು ಪತ್ತೆಹಚ್ಚಲು ಪೋಲಿಸರು ತನಿಖೆ ಆರಂಭಿಸಿದ್ದಾರೆ.
ಗೋವಾದಲ್ಲಿ ಕಳೆದ ಕೆಲ ದಿನಗಳಿಂದ ಕೊಲೆ, ಆತ್ಮಹತ್ಯೆಯಂತಹ ಘಟನೆಗಳು ಮರುಕಳಿಸುತ್ತಿದ್ದು ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸಿದೆ. ಕಳೆದ ಕೆಲ ದಿನಗಳ ಹಿಂದಷ್ಟೇ ಕಾರವಾರದಲ್ಲಿ ಕೊಲೆ ಕೃತ್ಯಕ್ಕೆ ಸುಪಾರಿ ನೀಡಿದ್ದ ಎನ್ನಲಾದ ಆರೋಪಿಯ ಶವ ನದಿಯಲ್ಲಿ ಪತ್ತೆಯಾಗಿತ್ತು. ಅದೇ ದಿನ ನದಿಯಲ್ಲಿ ಮತ್ತೊಂದು ಶವವೂ ಪತ್ತೆಯಾಗಿತ್ತು. ಗುರುವಾರ ಸಂಜೆ ಪಣಜಿ ಸಮೀಪದ ಮೆರಶಿಯಲ್ಲಿ ನಿಂತಿದ್ದ ಜೀಪ್ ವೊಂದರಲ್ಲಿ ಶವವೊಂದು ಪತ್ತೆಯಾಗಿತ್ತು.
ಗೋವಾದಲ್ಲಿ ಅಪರಾಧ ಪ್ರಕರಣ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.