ಸುದ್ಧಿಕನ್ನಡ ವಾರ್ತೆ
Goa: ಗೋವಾ ರಾಜಧಾನಿ ಪಣಜಿ ಸಮೀಪದ ಮೆರಶಿಯಲ್ಲಿ ಕಳೆದ ಸುಮಾರು ಒಂದು ತಿಂಗಳಿಂದ ನಿಂತಿದ್ದ ಜೀಪ್ ನಲ್ಲಿ ಪುರುಷನ ಮೃತದೇಹವೊಂದು ಪತ್ತೆಯಾಗಿದ್ದು, ಮೆರಶಿ ಸುತ್ತಮುತ್ತಲು ಆತಂಕ ಸೃಷ್ಠಿಯಾಗಿದೆ.(A dead body of a man was found in a jeep that had been standing for the past one month in Merashi near Panaji, the capital of Goa, and panic has been created around Merashi).
ಘಟನಾ ಸ್ಥಳಕ್ಕೆ ಪೋಲಿಸರು ಆಗಮಿಸಿದ್ದು ಹೆಚ್ಚಿನ ತಪಾಸಣಾ ಕಾರ್ಯ ಕೈಗೆತ್ತಿಕೊಂಡಿದ್ದಾರೆ. ಕಳೆದ ಸುಮಾರು ಒಂದು ತಿಂಗಳಿಂದ ಜೀಪ್ ಇಲ್ಲಿಲೇ ನಿಂತಿತ್ತು ಎನ್ನಲಾಗಿದೆ.
ಈ ಮೃತ ದೇಹದ ಗುರುತು ಪತ್ತೆ ಹಚ್ಚಲು ಪೋಲಿಸರು ಹೆಚ್ಚಿನ ತಪಾಸಣೆ ಆರಂಭಿಸಿದ್ದಾರೆ. ಕಳೆದ ಹಲವು ದಿನಗಳಿಂದ ಗೋವಾ ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಲೇ ಇದೆ. ಪೋಲಿಸರು ಕಟ್ಟೆಚ್ಚರ ವಹಿಸಿದ್ದರೂ ಕೂಡ ಅಪರಾಧಗಳ ಪ್ರಮಾಣದಲ್ಲಿ ಇಳಿಕೆಯಾಗದಿರುವುದು ಇನ್ನಷ್ಟು ಆತಂಕ ಹೆಚ್ಚಿಸಿದೆ.