ಸುದ್ದಿ ಕನ್ನಡ ವಾರ್ತೆ

GOA;ಗೋವಾದ ಮಾಪ್ಸ ವೆರ್ಲಾ ಕಾಣಕದಲ್ಲಿ ಬಾವಿಯಲ್ಲಿ 67 ವರ್ಷದ ವತ್ಸಲ ಕೋರ್ಗಾಂವಕರ ರವರ ಮೃತ ದೇಹ ಪಟ್ಟಿಯಾಗಿದೆ.

ಮೃತ ದೇಹವು ಬಾವಿಯಲ್ಲಿ ತೇಲುತ್ತಿರುವ ರೀತಿಯಲ್ಲಿ ಪತ್ತೆಯಾಗಿದೆ. ಮಾಪ್ಸ ಅಗ್ನಿಶಾಮಕದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿ ಮೃತ ದೇಹವನ್ನು ಹೊರತೆಗೆದಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ವಿಷ್ಣು ಗಾವಸ್, ಸ್ವಪ್ನೇಶ್ ಕಲಂಗುಟ್ಕರ್, ಅಮೋಲ್ ಸಾಟರ್ಡೆಕರ್, ಭಗವಾನ್ ಪಲ್ಲಿ  ಚಂದ್ರಕಾಂತ್ ನಾಯಕ್, ಸಂಜೀವ ಕೊರಗಾವ ಕರ್, ಮತ್ತಿತರರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಇದು ಆತ್ಮಹತ್ಯೆಯೊ ಅಥವಾ ಕೊಲೆಯೋ ಎಂಬ ಬಗ್ಗೆ ತನಿಕೆಯಿಂದ ತಿಳಿದು ಬರಬೇಕಾಗಿದೆ.