ಸುದ್ಧಿಕನ್ನಡ ವಾರ್ತೆ
Goa(ಮಾಪ್ಸಾ): ಮಾರಿಯೋ ಬ್ಯಾಪ್ಟಿಸ್ಟಾ ಮತ್ತು ಮೊಹಮ್ಮದ್ ಶೆಖ್ಮಿಯಾ, ಎಂಬ ಇಬ್ಬರ ನೇತೃತ್ವದ ಮುಖವಾಡದ ಗ್ಯಾಂಗ್, ಕಿಟಕಿಗಳಲ್ಲಿ ಕೇವಲ ಗಾಜಿನ ಬಾಗಿಲುಗಳನ್ನು ಹೊಂದಿರುವ ಗ್ರೀಲ್ ಗಳಿಲ್ಲದ ಮನೆಗಳನ್ನು ಗುರಿಯಾಗಿರಿಸಿಕೊಂಡಿದೆ. ಗಾಜಿನ ಕಿಟಕಿಗಳನ್ನು ಮಾತ್ರ ಹೊಂದಿರುವ ಮನೆಗಳನ್ನು ಹೊರತುಪಡಿಸಿ ಅವರು ಇತರ ಮನೆಗಳಲ್ಲಿ ಕಳ್ಳತನ ಮಾಡಲಿಲ್ಲ.

ಈ ಕಳ್ಳರು ಸುಮಾರು 70 ಮನೆಗಳಿಗೆ ಕನ್ನ ಹಾಕಿದ್ದಾರೆ. ಆದರೆ, ಗೋವಾದ ಪರ್ವರಿಯಲ್ಲಿ 5, ಫೋಂಡಾದಲ್ಲಿ 5, ಪಣಜಿಯಲ್ಲಿ 3, ಮಾಪ್ಸಾದಲ್ಲಿ 4, ಹಣಜುಣನಲ್ಲಿ 3, ಓಲ್ಡ ಗೋವಾದಲ್ಲಿ 1 ಮತ್ತು ವೆರ್ಣಾದಲ್ಲಿ 1 ಕಳ್ಳತನ ಪ್ರಕರಣಗಳು ಸೇರಿದಂತೆ ಈ ಧರೋಡೆಕೋರರ ವಿರುದ್ಧ ಗೋವಾ ರಾಜ್ಯದ ವಿವಿಧ ಪೋಲಿಸ್ ಠಾಣೆಗಳಲ್ಲಿ 22 ಪ್ರಕರಣಗಳು ದಾಖಲಾಗಿವೆ.

ಈ ಧರೋಡೆಕೋರರು ಕೇವಲ ಗ್ಲಾಸ್ ಕಿಟಕಿಯನ್ನು ಹೊಂದಿರುವ ಬಾಗಿಲುಗಳನ್ನು ಅನ್ಲಾಕ್ ಮಾಡಿ ಮತ್ತು ಕಬ್ಬಿಣದ ರಾಡ್ ನೊಂದಿಗೆ ಮನೆಗಳನ್ನು ಪ್ರವೇಶಿಸುತ್ತಾನೆ. ನೆಲ ಅಂತಸ್ತಿನ ಮನೆ ಇರಲಿ, ನಾಲ್ಕೈದು ಮಹಡಿಗಳ ಫ್ಲಾಟ್ ಇರಲಿ, ಮಾರಿಯೋ ಅಲ್ಲಿಯೇ ಹತ್ತಿ ಬಾಗಿಲು ತೆರೆದು ಕಳ್ಳತನಕ್ಕೆ ಯತ್ನಿಸುತ್ತಿದ್ದ ಎನ್ನಲಾಗಿದೆ.

ಈ ಕಳ್ಳತನಕ್ಕಾಗಿ ಶಂಕಿತರು ಮಡಗಾಂವ್ ನಿಂದ ಮಾಸಿಕ ಬಾಡಿಗೆಗೆ ನಾಲ್ಕು ಬಾಡಿಗೆ ಕ್ಯಾಬ್ ಕಾರುಗಳನ್ನು ತೆಗೆದುಕೊಂಡಿದ್ದರು. ಹೀಗಾಗಿ ಇದು ಪ್ರವಾಸಿಗರ ಕಾರುಗಳೆಂದು ಪೊಲೀಸರು ಭಾವಿಸಬೇಕು ಎಂದು ಈ ರೀತಿ ಪೋಲಿಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದರು. ಆದರೆ ಪೋಲಿಸರು ಸತತ ಕಾರ್ಯಾಚರಣೆ ನಡೆಸಿ ಮುಖವಾಡದ ಈ ಗ್ಯಾಂಗ್ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಕ್ಟೋಬರ್ 2 ರಂದು ಈ ಮುಖವಾಡದ ಗ್ಯಾಂಗ್ ಅನ್ನು ಪೊಲೀಸರು ಭೇದಿಸಿದ್ದಾರೆ. ಅವರಲ್ಲಿ, ಅಟಲ್ ಚೋರ್ಟಾ ಮಾರಿಯೋ ಬ್ಯಾಪ್ಟಿಸ್ಟಾ ಅಲಿಯಾಸ್ ಸಂತಾನ್ (44, ಗ್ರಾಂಡ್ ಪೇಡೆ, ಬಾನಾವಳಿ ನಿವಾಸಿ), ಮೊಹಮ್ಮದ್ ಸುಫಿಯಾನ್ ಶೆಖ್ಮಿಯಾ (20, ಕಲ್ಕೊಂಡ-ಮಡ್ಗಾಂವ್ ನಿವಾಸಿ) ಜೊತೆಗೆ ಫಿಲಿಪ್ ರಾಟೊ (ಬಾನಾವಳಿ ನಿವಾಸಿ) ಮತ್ತು ಸಮರ್ ಪಾಲ್ (ದವರ್ಲಿ ನಿವಾಸಿ ಮತ್ತು ಸ್ಥಳೀಯ) ಈ ನಾಲ್ವರನ್ನು ಬಂಧಿಸಲಾಗಿದೆ. ಪ್ರಸ್ತುತ, ಈ ಶಂಕಿತರು ಪರ್ವರಿ ಪೊಲೀಸ್ ವಶದಲ್ಲಿದ್ದಾರೆ.