ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಅಸು ಗ್ರಾಮ ಪಂಚಾಯತ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಿಂದೋಳಿ ಶಾಲೆಯಲ್ಲಿ ಸಡಗರ ಸಂಭ್ರಮದಿಂದ ಸಾವಿತ್ರಿಬಾಯಿ ಪುಲೆ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರು,ಸಹ ಶಿಕ್ಷಕರು,ವಿದ್ಯಾರ್ಥಿಗಳು ಸಾವಿತ್ರಿ ಪುಲೆ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕರಾದ ಅನಿಲ ರಾಠೋಡರವರು ಸಾವಿತ್ರಿಬಾಯಿ ಪುಲೆ ಭಾರತದ ಮೊದಲ ಮಹಿಳಾ ಶಿಕ್ಷಕಿ,ಸಮಾಜ ಸುಧಾರಕಿ,ಕವಿ. ಇವರು ಪತಿ ಜ್ಯೋತಿರಾವ್ ಪುಲೆಯವರೊಂದಿಗೆ ಮಹಿಳೆಯರ ಮತ್ತು ಕೆಳವರ್ಗದ ಶಿಕ್ಷಣ ಹಾಗೂ ಸಬಲೀಕರಣಕ್ಕಾಗಿ ಹೋರಾಡಿದರು.1848 ರಲ್ಲಿ ಭಾರತದ ಮೊದಲ ಬಾಲಕಿಯರ ಶಾಲೆಯನ್ನು ಸ್ಥಾಪಿಸಿ,ಜಾತಿ ಮತ್ತು ಲಿಂಗ ತಾರತಮ್ಯದ ವಿರುದ್ಧ ಧ್ವನಿ ಎತ್ತಿದರು.ಇವರನ್ನು ಆಧುನಿಕ ಶಿಕ್ಷಣದ ತಾಯಿ ಎಂದು ಕರೆಯಲಾಗುತ್ತದೆ.

ಇವರ ಪ್ರಮುಖ ಕೊಡುಗೆಗಳಾದ 1848 ರಲ್ಲಿ ಪುಣೆಯಲ್ಲಿ ಹುಡುಗಿಯರಿಗಾಗಿ ಮೊದಲ ಶಾಲೆಯನ್ನು ತೆರೆದರು.ಜಾತಿ ವ್ಯವಸ್ಥೆ ಮತ್ತು ಸಾಮಾಜಿಕ ಅಸಮಾನತೆಗಳನ್ನು ತೊಡೆದುಹಾಕಲು ಶ್ರಮಿಸಿದರು.

ಮಹಿಳಾ ಸಬಲೀಕರಣ ಮತ್ತು ಸ್ರೀವಾದದ ಕುರಿತು ಹೋರಾಡಿದರು.ಕಾವ್ಯಾ ಪುಲೆ ಮತ್ತು ಬವನ್ ಕಾಶಿ ಸುಬೋಧ ರತ್ನಾಕರ್ ನಂತಹ ಕೃತಿಗಳನ್ನು ಪ್ರಕಟಿಸಿದರು ಎಂದು ಹೇಳಿದರು. ಕಾರ್ಯಕ್ರಮದ ಸ್ವಾಗತ,ನಿರೂಪಣೆಯನ್ನು ಸಹ ಶಿಕ್ಷಕರಾದ ಆನಂದ ಪಿ ಯವರು ನಿರ್ವಹಿಸಿ ಸಾವಿತ್ರಿಬಾಯಿ ಪುಲೆಯವರ ಬಾಲ್ಯದ ಜೀವನ,ಅವರ ಶಿಕ್ಷಣ,ಸಾಮಾಜಿಕ ಕ್ಷೇತ್ರದಲ್ಲಿನ ವಿಶೇಷವಾಗಿ ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಒತ್ತು ನೀಡಿರುವುದರ ಕುರಿತು ಮಾತನಾಡಿದರು. ಕೊನೆಯಲ್ಲಿ ಸಹ ಶಿಕ್ಷಕಿಯಾದ ವಿದ್ಯಾ ಮೇಡಂ ಕಾರ್ಯಕ್ರಮದ ಕುರಿತು ಸಂದರ್ಭೋಚಿತವಾಗಿ ಮಾತನಾಡಿದರು.