ಸುದ್ಧಿಕನ್ನಡ ವಾರ್ತೆ
ಶಿರಸಿ: ಹಿಂದೂ ಸಮ್ಮೇಳನ ಸಂಚಾಲನಾ ಸಮೀತಿ ಶಿರಸಿ ಬತಾಲೂಕು ಭೈರುಂಬೆ ಮಂಡಲದ ವತಿಯಿಂದ ಜನವರಿ 4 ರಂದು ಭಾನುವಾರ ಮಧ್ಯಾನ್ಹ 3 ಗಂಟೆಗೆ ಸೋಂದಾ ಶ್ರೀಕ್ಷೇತ್ರ ಸ್ವಾದಿ ದಿಗಂಬರ ಜೈನ ಮಠದಲ್ಲಿ ಹಿಂದೂ ಸಮ್ಮೇಳನವನ್ನು ಆಯೋಜಿಸಲಾಗಿದೆ.
ಈ ಹಿಂದೂ ಸಮ್ಮೇಳನದಲ್ಲಿ ಶ್ರೀ ಸ್ವರ್ಣವಲ್ಲೀ ಮಹಾಸಂಸ್ಥಾನ ಸೋಂದಾ ಮಠದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು , ಸೋದೆ ಶ್ರೀವಾಧೀರಾಜ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, ಸೋಂದಾದ ಶ್ರೀಕ್ಷೇತ್ರ ಸ್ವಾದಿ ದಿಗಂಬರ ಜೈನ ಮಠದ ಶ್ರೀಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವಿದುಷಿ ರೇಖಾ ಗೊರೆ,ಕಡೆಗುಂಟ, ದಿಕ್ಸೂಚಿ ಭಾಷಣಕಾರರಾಗಿ ಪ್ರಜ್ಞಾ ಪ್ರವಾಹದ ಅಖಿಲ ಭಾರತ ಸಹಸಂಯೋಜಕ ರಘುನಂದನ ರವರು ಉಪಸ್ಥಿತರಿರಲಿದ್ದಾರೆ. ಮಧ್ಯಾನ್ಹ 2.30 ರಿಂದ ಮುತ್ತಿನ ಕೆರೆಯಿಂದ ಶೋಭಾಯಾತ್ರೆ ಹೊರಡಲಿದೆ, ಜನತೆ 20 ನಿಮಿಷ ಮುಂಚಿತವಾಗಿ ಉಪಸ್ಥಿತರಿರುವಂತೆ ಅಧ್ಯಕ್ಷರಾದ ಅನಂತ ಶ್ರೀಪಾದ ಭಟ್ ಹುಳಗೋಳ, ಸಂಚಾಲಕರಾದ ವಿಶ್ವನಾಥ ಲ.ಹೆಗಡೆ ಬುಗಡಿಮನೆ ಪ್ರಕಟಣೆಯಲ್ಲಿ ಕೋರಿದ್ದಾರೆ.
